ಚೀನಾದ ನಿದ್ದೆಗೆಡಿಸಿದ ಭಾರತದ ಕಾಮಗಾರಿ

June 26, 2020

ನವದೆಹಲಿ ಜೂ.26 : ಈಶಾನ್ಯ ಲಡಾಖ್ ನಲ್ಲಿ ಗಡಿ ಕ್ಯಾತೆ, ಸಂಘರ್ಷದ ನಡುವೆಯೇ, ವಿಚಲಿತಗೊಳ್ಳದ ಭಾರತ ಗಡಿ ಪ್ರದೇಶಗಳಲ್ಲಿ ಸೇನಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿರುವುದು ಚೀನಾದ ನಿದ್ದೆಗೆಡಿಸಿದೆ. ಪರಿಣಾಮ ಗಡಿಯಲ್ಲಿ ಎಂದಿಗಿಂತಲೂ ಹೆಚ್ಚಾಗಿ ಅಲರ್ಟ್ ಆಗಿರುವ ಚೀನಾ ಈಗ ಡೆಪ್ಸಾಂಗ್ ಪ್ಲೇಸ್ ಬಳಿಯ ಎಲ್‍ಎಸಿಯಲ್ಲಿ ಮತ್ತೆ ಸೇನಾ ಸಿಬ್ಬಂದಿಗಳ ನಿಯೋಜನೆಯನ್ನು ಪ್ರಾರಂಭಿಸಿದೆ ಎಂದು ಜೀ ನ್ಯೂಸ್ ವರದಿ ಪ್ರಕಟಿಸಿದೆ.
ಆಯಕಟ್ಟಿನ ಪ್ರದೇಶದಲ್ಲಿರುವ (ದಾರ್‍ಬುಕ್-ಶ್ಯೋಕ್-ದೌಲತ್ ಬೇಗ್ ಒಲ್ಡಿ, ಡಿಎಸ್-ಡಿಬಿಒ) ರಸ್ತೆಯನ್ನು ಈಗಾಗಲೇ ಭಾರತ ಪೂರ್ಣಗೊಳಿಸಿದೆ. ಇದರ ಹೊರತಾಗಿ ಎಲ್‍ಎಸಿ ಉದ್ದಕ್ಕೂ ಇರುವ ದಾರ್ ಬುಕ್ ನಿಂದ ದೌಲತ್ ಬೇಗ್ ಒಲ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೂ ಭಾರತ ನಿರ್ಮಿಸಿದೆ.
ಇದು ಚೀನಾ ಪಡೆಗಳ ನಿದ್ದೆಗೆಡಿಸಿದ್ದು, ಈಗ ಭಾರತ-ಚೀನಾ ಗಡಿಯಲ್ಲಿರುವ ಅನೇಕ ಪ್ರದೇಶಗಳಲ್ಲಿ ಒಟ್ಟಿಗೆ ಸೇನೆ ನಿಯೋಜನೆಗೆ ಚೀನಾ ಮುಂದಾಗಿದೆ. ಈ ನಡುವೆ ಭಾರತ ಸಹ ಚೀನಾ ಚಟುವಟಿಕೆಗಳ ಮೇಲೆ ದೌಲತ್ ಬೇಗ್ ಒಲ್ಡಿ ಮೂಲಕ ಗಮನವಿಡಲು ತನ್ನ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿದೆ.
ಗಡಿ ಪ್ರದೇಶದಲ್ಲಿ ಚೀನಾ ಆಕ್ರಮಣಕಾರಿ ನೀತಿಯ ಬಗ್ಗೆ ಜೀ ನ್ಯೂಸ್ ನೊಂದಿಗೆ ಚರಕ ಪ್ರಶಸ್ತಿ ವಿಜೇತ ನಿವೃತ್ತ ಕ್ಯಾಪ್ಟನ್ ತಾಶಿ ಮಾತನಾಡಿದ್ದು, ಭಾರತ ಗಲ್ವಾನ್ ಕಣಿವೆಯಲ್ಲಿ 72 ಗಂಟೆಗಳಲ್ಲಿ ಸೇತುವೆ ನಿರ್ಮಾಣ ಮಾಡುತ್ತದೆ, ರಸ್ತೆ ಕಾಮಗಾರಿಗಳನ್ನು ತ್ವರಿತಗೊಳಿಸುತ್ತದೆ, ಚೀನಾ ಪಡೆಗೆ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ.