ಹೊರ ದೇಶ ಮತ್ತು ಹೊರ ರಾಜ್ಯದಿಂದ ಕೊಡಗು ಜಿಲ್ಲೆಗೆ ಬಂದವರಿಗೆ ಸೋಂಕು

26/06/2020

ಮಡಿಕೇರಿ ಜೂ.26 : ಪುಣೆಯಿಂದ ಕೊಡಗು ಜಿಲ್ಲೆಗೆ ಹಿಂತಿರುಗಿರುವ 24 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಇವರು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ವಾಸಿಯಾಗಿದ್ದಾರೆ.
ವಿರಾಜಪೇಟೆ ತಾಲ್ಲೂಕು ಕೊಂಡಂಗೇರಿ ಗ್ರಾಮದ 23 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿರುತ್ತದೆ. ಇವರು ವಿದೇಶದಿಂದ (ಶಾರ್ಜಾ) ಮರಳಿರುತ್ತಾರೆ.
ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಹೋಬಳಿಯ ಹುಲುಸೆ ಗ್ರಾಮದ 46 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇವರು ಬೆಂಗಳೂರಿನಿಂದ ಜಿಲ್ಲೆಗೆ ಪ್ರಯಾಣಿಸಿದವರಾಗಿದ್ದಾರೆ.