ಎರಡು ವರ್ಷದ ಮಗುವನ್ನು ಕಾಡಿದ ಕೊರೋನಾ

26/06/2020

ಮಡಿಕೇರಿ ಜೂ.26 : ಕೊರೋನಾ ಮುಕ್ತ ಜಿಲ್ಲೆಯಾಗಿ ಹಸಿರ ವಲಯದಲ್ಲಿದ್ದ ಕೊಡಗು ಇದೀಗ ನಿಧಾನವಾಗಿ ಆತಂಕದೆಡೆಗೆ ಸಾಗುತ್ತಿದೆ. ಬೆಂಗಳೂರಿನ ಪ್ರಯಾಣದ ಇತಿಹಾಸವಿರುವ ಗಂಡ, ಹೆಂಡತಿ ಮತ್ತು ಎರಡು ವರ್ಷ ವಯಸ್ಸಿನ ಮಗುವಿಗೆ ಕೋವಿಡ್-19 ಸೋಂಕು ಇಂದು ದೃಢಪಟ್ಟಿದೆ. ಇವರು ವಿರಾಜಪೇಟೆ ತಾಲ್ಲೂಕಿನ ಹುಂಡಿ ಮತ್ತು ಸೋಮವಾರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ವಾಸ ಮಾಡಿದ್ದರು. ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಇವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.