ಮಡಿಕೇರಿ ಸ್ಕ್ಯಾನಿಂಗ್ ಅಂಡ್ ಡಯೋಗ್ನೋಸ್ಟಿಕ್ ಸೆಂಟರ್ ಗೆ ಹೋದವರಿಗೆ ಸಂಪರ್ಕ ತಡೆ ಕಡ್ಡಾಯ

June 26, 2020

ಮಡಿಕೇರಿ ಜೂ.26 : ಮಡಿಕೇರಿ ನಗರದ ಶ್ರೀಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿ ಮಡಿಕೇರಿ ಹೆಲ್ತ್ ಕೇರ್ ಸೆಂಟರ್ (ಮಡಿಕೇರಿ ಸ್ಕ್ಯಾನಿಂಗ್ ಅಂಡ್ ಡಯೋಗ್ನೋಸ್ಟಿಕ್ ಸೆಂಟರ್) ಹೆಸರಿನಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ವೈದ್ಯರು ನಡೆಸುತ್ತಿರುವ ಖಾಸಗಿ ಕ್ಲಿನಿಕ್ ನಲ್ಲಿ ಮತ್ತು ಸದರಿ ವೈದ್ಯರಿಂದ ಜಿಲ್ಲಾ ಆಸ್ಪತ್ರೆ, ಮಡಿಕೇರಿಯಲ್ಲಿ ಚಿಕಿತ್ಸೆ ಪಡೆದವರು ದಿನಾಂಕ:10-06-2020 ಮತ್ತು ಅದರ ನಂತರದ ದಿನಾಂಕಗಳಲ್ಲಿ ಚಿಕಿತ್ಸೆ ಪಡೆದವರು, ತಾವು ಚಿಕಿತ್ಸೆ ಪಡೆದ ದಿನಾಂಕದಿಂದ 14 ದಿನಗಳ ಕಾಲ ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿರಲು ಜಿಲ್ಲಾಡಳಿತ ಕೋರಿದೆ.
ಅಲ್ಲದೆ ತಾವು ಚಿಕಿತ್ಸೆ ಪಡೆದ ದಿನಾಂಕದಿಂದ 10 ದಿನಗಳೊಳಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಬಂದು ಗಂಟಲು/ಮೂಗು ದ್ರವ ಮಾದರಿಯನ್ನು ಪರೀಕ್ಷೆಗಾಗಿ ನೀಡಲು ಕೋರಿದೆ. ಸದರಿ ಅವಧಿಯೊಳಗೆ ಏನಾದರೂ ಕೋವಿಡ್-19 ರ ಸಂಬಂಧಿತ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಹಾಜರಾಗಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

error: Content is protected !!