ಕೊಡಗಿನ ಜನತೆಯ ಮನ ಗೆದ್ದಿದ್ದ ಡಾ. ಸುಮನ್ ಡಿ. ಪನ್ನೇಕರ್ ವರ್ಗಾವಣೆ

26/06/2020

ಮಡಿಕೇರಿ ಜೂ.26 : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರಕಾರ ತೆರವಾದ ಸ್ಥಾನಕ್ಕೆ 2016ನೇ ಕರ್ನಾಟಕ ಬ್ಯಾಚ್ ಕ್ಷಮಾ ಮಿಶ್ರಾ ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ. ಸುಮನ್ ಅವರನ್ನು ಬೆಂಗಳೂರಿನ ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ಸಿಎ ಆರ್  ಯೂನಿಟ್ ನ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಆಗಿ ವರ್ಗಾವಣೆ ಮಾಡಲಾಗಿದೆ.
ಸುಮನ್ ಅವರು ಕಳೆದ 2 ವರ್ಷದಿಂದ ಉತ್ತಮ ಕಾರ್ಯ ನಿರ್ವಹಣೆಯೊಂದಿಗೆ ಕೊಡಗಿನ ಜನತೆಯ ಮನ ಗೆದ್ದಿದ್ದರು.