ಗಾಂಜಾ ಸಾಗಾಟ : ವಿರಾಜಪೇಟೆ ಪೊಲೀಸರಿಂದ ಮಾಲು ಸಹಿತ ಇಬ್ಬರ ಬಂಧನ

27/06/2020

ಮಡಿಕೇರಿ ಜೂ.27 : ಆಟೋ ರಿಕ್ಷಾವೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ವೀರಾಜಪೇಟೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, 33 ಸಾವಿರ ರೂ. ಮೌಲ್ಯದ ಗಾಂಜಾ ಮತ್ತು ಪ್ರಕರಣಕ್ಕೆ ಬಳಸಿದ ವಾಹನ ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಕಲ್ಯಾಣಗಿರಿ ನಿವಾಸಿ ಡಿ.ಐ. ಮಹಮ್ಮದ್ ಇಲಿಯಾಸ್ ಅಹಮ್ಮದ್ ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದ ನಿವಾಸಿ ಜಬಿಉಲ್ಲಾಖಾನ್ ಎಂಬವರೆ ಬಂಧಿತ ಆರೋಪಿಗಳು
ವೀರಾಜಪೇಟೆ ನಗರಕ್ಕೆ ಆಟೋ ರಿಕ್ಷಾವೊಂದರಲ್ಲಿ ಗಾಂಜಾವನ್ನು ಮಾರಾಟ ಮಾಡಲು ತರುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಆಧರಿಸಿ, ವೀರಾಜಪೇಟೆ ನಗರ ಪೆÇಲೀಸ್ ಠಾಣೆಯ ಪಿಎಸ್‍ಐ ಹೆಚ್.ಎಸ್. ಬೋಜಪ್ಪ ಮತ್ತು ಸಿಬ್ಬಂದಿಗಳು ಶನಿವಾರ ನಗರದ ಹೊರ ವಲಯದ ಕಾವೇರಿ ಕಾಲೇಜು ಬಳಿ ಆಟೋ ರಿಕ್ಷಾವೊಂದನ್ನು ತಪಾಸಣೆಗೆ ಒಳಪಡಿಸಿ ಅದರಲ್ಲಿದ್ದ ಆರೋಪಿಗಳನ್ನು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ವೀರಾಜಪೇಟೆ ನಗರ ಪೆÇಲೀಸ್ ಠಾಣಾ ಪೆÇ್ರಬೇಷನರಿ ಪಿಎಸ್‍ಐ. ವಿನಯ್ ಕುಮಾರ್ ಸಿ., ಎಸ್.ಅಭಿಜಿತ್, ಎಎಸ್‍ಐ ರವರುಗಳಾದ ಸಿ.ವಿ. ಶ್ರೀಧರ್, ಸಿಬ್ಬಂದಿಗಳಾದ ಮುಸ್ತಾಫ, ಪಿ.ಯು. ಮುನೀರ್, ಎನ್.ಎಸ್ ಲೋಕೇಶ, ಗಿರೀಶ, ಈರಪ್ಪ ವಠಾರ, ಯೋಗೇಶ್ ಪಾಲ್ಗೊಂಡಿದ್ದರು.