ಕ್ರಿಮಿ ನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣು : ಕೆದಮಳ್ಳೂರು ಗ್ರಾಮದಲ್ಲಿ ಘಟನೆ

June 27, 2020

ಮಡಿಕೇರಿ ಜೂ.27 : ಮಹಿಳೆಯೊಬ್ಬರು ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆಯ ಕೆದಮಳ್ಳೂರು ಪಂಚಾಯಿತಿ ವ್ಯಾಪ್ತಿಯ ತೋಮರ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಕೆ.ಗಣೇಶ್ ಅವರ ಪತ್ನಿ ಕೆ.ಜಿ.ಸರಸ್ವತಿ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೃತರು ಕೇರಳ ರಾಜ್ಯದ ಮನೆಯೊಂದರಲ್ಲಿ ಗೃಹ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತಿದ್ದರು. ಒಂದು ತಿಂಗಳ ಹಿಂದೆ ಪತಿಯ ತಂದೆಗೆ ಅನಾರೋಗ್ಯವೆಂದು ಸ್ವಗ್ರಾಮಕ್ಕೆ ಅಗಮಿಸಿದ್ದರು. ಕಳೆದ ಹಲವು ತಿಂಗಳುಗಳಿಂದ ಸರಸ್ವತಿ ಉದರ ಬೇನೆಯಿಂದ ಬಳಲುತಿದ್ದರು ಎನ್ನಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ಆಸ್ಪತ್ರೆಯಿಂದ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!