ನಿರ್ಗಮಿತ ಎಸ್ ಪಿ ಡಾ.ಸುಮನ್ ಅವರಿಗೆ ಲಾರಿ ಮಾಲೀಕರ ಸಂಘದಿಂದ ಸನ್ಮಾನ

27/06/2020

ಮಡಿಕೇರಿ ಜೂ.27 : ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ಮಡಿಕೇರಿ ಲಾರಿ ಮಾಲೀಕರ ಹಾಗೂ ಚಾಲಕರ ಸಂಘ ಆತ್ಮೀಯವಾಗಿ ಸನ್ಮಾನಿಸಿತು.
ಎಸ್ ಪಿ ಕಚೇರಿಗೆ ಭೇಟಿ ನೀಡಿದ ಸಂಘದ ಪ್ರಮುಖರು ಡಾ.ಸುಮನ್ ಅವರ ವರ್ಗಾವಣೆ ಕುರಿತು ಬೇಸರ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆ ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿಯನ್ನು ಕಳೆದುಕೊಳ್ಳುತ್ತಿದೆ, ಇವರ ಸೇವೆ ಅವಿಸ್ಮರಣೀಯವೆಂದು ಶ್ಲಾಘಿಸಿದರು. ಸಂಘದ ಅಧ್ಯಕ್ಷ ಶಿವ ಬೋಪಣ್ಣ, ಸಂಘದ ಉಪಾಧ್ಯಕ್ಷ ಬಿ.ಜಿ.ಮೋಹನ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಗಣೇಶ್, ಗೌರವಾಧ್ಯಕ್ಷ ತಿಮ್ಮಪ್ಪ ರೈ, ಸದಸ್ಯ ಕೆಂಚಪ್ಪ ಮತ್ತಿತರರು ಹಾಜರಿದ್ದು, ಡಾ.ಸುಮನ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ವರದಿ ::: ಚಂದನ್ ನಂದರಬೆಟ್ಟು :::