ಸುಂಟಿಕೊಪ್ಪದಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್

28/06/2020

ಮಡಿಕೇರಿ ಜೂ.28 : ಸುಂಟಿಕೊಪ್ಪ ಸಂತೆ ವ್ಯಾಪಾರ ಬಂದ್ ಆಗಿದ್ದರೂ ಎಂದಿನಂತೆ ದಿನಸಿ ಅಂಗಡಿ ತರಕಾರಿ ಅಂಗಡಿ ವ್ಯಾಪಾರ ಎಂದಿನಂತೆ ನಡೆಯಿತು. ಕರೋನಾ ಭೀತಿಯಿಂದ ಜನರ ಓಡಾಟ ವಿರಳವಾಗಿತ್ತು ವಾಹನ ಸಂಚಾರ ಎಂದಿನಂತೆ ಇತ್ತು. ಛೇಂಬರ್ ಆಫ್ ಕಾರ್ಮಸ್ ಹಾಗೂ ವಿವಿಧ ಸಂಘ ಸಂಸ್ಥೆ ಕೋರಿಮೇರೆಗೆ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಸೂಚನೆಯನ್ನು ನೀಡಿತ್ತು. ಅದರಂತೆ ಅಂಗಡಿಗಳು ಅಪರಾಹ್ನ 2 ಗಂಟೆಯ ನಂತರ ಸಂಪೂರ್ಣ ಮುಚ್ಚಿದ್ದವು.