ಸುಂಟಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಸಭೆ

28/06/2020

ಮಡಿಕೇರಿ ಜೂ.28 : ಚೇಂಬರ್ ಆಫ್ ಕಾಮರ್ಸ್‍ನ ಸುಂಟಿಕೊಪ್ಪ ಸ್ಥಾನೀಯ ಸಮಿತಿ ಮತ್ತು ವಿವಿಧ ಸಂಘ, ಸಂಸ್ಥೆಗಳು ಸ್ಥಳೀಯ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದವು. ಸಮಿತಿಯ ಅಧ್ಯಕ್ಷ ಡಿ.ನರಸಿಂಹ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಬ್ಬರ ಆರೋಗ್ಯದ ಹಿತದೃಷ್ಟಿಯಿಂದ ಅಂಗಡಿ, ಮುಂಗಟ್ಟುಗಳನ್ನು ಅರ್ಧ ದಿನವಾದರೂ ಮುಚ್ಚುವುದು ಸೂಕ್ತವೆಂದರು. ಲಾಕ್‍ಡೌನ್ ಇದ್ದಾಗ ಕೊಡಗಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ಕಡಿಮೆಯಿದ್ದು, ಈಗ ಸೋಂಕು ವ್ಯಾಪಿಸುತ್ತಿದ್ದು, ಆತಂಕ ಸೃಷ್ಟಿಯಾಗಿದೆ ಎಂದರು.