ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯ : ನೂತನ ಧರ್ಮಗುರು ಅರುಳ್ ಸೆಲ್ವಕುಮಾರ್ ಅಧಿಕಾರ ಸ್ವೀಕಾರ

June 28, 2020

ಮಡಿಕೇರಿ ಜೂ.28 : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾಧರ್ ಎಡ್ವರ್ಡ್ ವಿಲಿಯಂ ಸಾಲ್ಡಾನ ಅವರಿಂದ ನೂತನ ಧರ್ಮಗುರು ಅರುಳ್ ಸೇಲ್ವಕುಮಾರ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡರು.
ಸಂತ ಮೇರಿ ಶಾಲಾ ಸಭಾಂಗಣದಲ್ಲಿ ಕೂಡಿಗೆಯ ವಂದನೀಯ ಧರ್ಮಗುರುಗÀ ಫಾದರ್ ಜಾನ್ ಡಿ’ಕುನ್ನ ಅವರ ದಿವ್ಯ ಬಲಿಪೂಜೆಯನ್ನು ಮೂವರು ಧರ್ಮಗರುಗಳು ಸರ್ಮಪಿಸಿದರು. ಇಲ್ಲಿಯವರೆಗೆ ಸೇವೆ ಸಲ್ಲಿಸುತ್ತಿದ್ದ ಪಾಧರ್ ಎಡ್ವರ್ಡ್ ವಿಲಿಯಂ ಸಾಲ್ಡನಾ ಅವರನ್ನು ಹೆಚ್‍ಡಿ ಕೋಟೆಯ ಸಂತ ಮರಿಯಮ್ಮ ದೇವಾಲಯಕ್ಕೆ ವರ್ಗಾವಣೆಗೊಳಿಸಲಾಗಿದೆ.