ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ 40 ಮಂದಿಗೆ ಚಿಕಿತ್ಸೆ

28/06/2020

ಮಡಿಕೇರಿ ಜೂ.28 : ನಾಲ್ವರು ವೈದ್ಯರು ಸೇರಿದಂತೆ 40 ಮಂದಿ ಕೊರೋನಾ ಸೋಂಕಿತರಿಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 43 ಆಗಿದ್ದು, ಈ ಪೈಕಿ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಸಾರ್ವಜನಿಕರು ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ದಿನಾಂಕ:28-06-2020
ಕೋವಿಡ್-19 ರ ಸಂಬಂಧ ಪತ್ರಿಕಾ ಪ್ರಕಟಣೆ 
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 
      ಇತರೆ ದೇಶ/ರಾಜ್ಯಗಳಿಂದ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. 
ಇತರೆ ದೇಶ/ರಾಜ್ಯ/ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರ ಪೈಕಿ ಸಂಪರ್ಕ ತಡೆಯಲ್ಲಿರುವ ಜನರ ವಿವರ ಕೆಳಕಂಡಂತಿದೆ.
1. ಇತರೆ ದೇಶದ  ಜನರು- 172. ಇತರೆ ರಾಜ್ಯದ ಜನರು-614 3.  ಒಟ್ಟು ಜನರು-631
ಪ್ರಯೋಗಾಲಯ ಪರೀಕ್ಷಾ ವರದಿ ವಿವರ:
ಇಲ್ಲಿಯವರೆಗೆ ಒಟ್ಟು  8425 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. • ಪಾಸಿಟಿವ್ ಪ್ರಕರಣಗಳು- 43 (ಮೂವರು ಗುಣಮುಖರಾಗಿದ್ದಾರೆ)• ನೆಗೆಟಿವ್ ವರದಿ ಬಂದ ಪ್ರಕರಣಗಳು-6923• ವರದಿ ನಿರೀಕ್ಷಿತ ಪ್ರಕರಣಗಳು-1459
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ  ದಾಖಲಿರುವ ಪ್ರಕರಣಗಳು:
          ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ  160  ಜನರು ದಾಖಲಿರುತ್ತಾರೆ.
ಇತರೆ ವಿಷಯಗಳು: 
ಕೊಡಗು ಜಿಲ್ಲೆಯಲ್ಲಿ ಈ ದಿನ ಹೊಸದಾಗಿ 03  ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದೆ. ವಿವರ ಕೆಳಕಂಡಂತಿದೆ. 
1. ಜ್ವರದ ಲಕ್ಷಣವಿದ್ದ ಕುಶಾಲನಗರದ ಪದವಿ ಕಾಲೇಜು ಬಳಿ ಇರುವ ಅಣ್ಣೇಗೌಡ ಬಡಾವಣೆಯ ನಿವಾಸಿ 43 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
2. ವಿರಾಜಪೇಟೆಯ ಮೀನುಪೇಟೆ ನಿವಾಸಿ 41 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರು ವಿದೇಶದಿಂದ ಹಿಂದಿರುಗಿದವರಾಗಿದ್ದಾರೆ. 
3. ಮಡಿಕೇರಿ ತಾಲ್ಲೂಕು ನಾಪೋಕ್ಲುವಿನ 43 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢ ಪಟ್ಟಿದೆ. ಇವರು ವಿದೇಶದಿಂದ ಹಿಂತಿರುಗಿದವರಾಗಿದ್ದಾರೆ. 
      ಇವರನ್ನು ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
      ಹೊಸದಾಗಿ ಕುಶಾಲನಗರದ ಅಣ್ಣೇಗೌಡ ಬಡಾವಣೆ ಮತ್ತು ವಿರಾಜಪೇಟೆ ನಗರದ ಮೀನುಪೇಟೆಯನ್ನು ನಿಯಂತ್ರಿತ ಪ್ರದೇಶವನ್ನು ಮಾಡಲಾಗಿದೆ. 

ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ:43 ಕ್ಕೇರಿದ್ದು, 03 ಪ್ರಕರಣ ಬಿಡುಗಡೆಗೊಂಡಿರುತ್ತಾರೆ. 40 ಪ್ರಕರಣಗಳು ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.  ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು-20 ಆಗಿರುತ್ತದೆ.