ಕರ್ಕಳ್ಳಿ-ಬಳಗುಂದ ಗ್ರಾಮದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

28/06/2020

ಸೋಮವಾರಪೇಟೆ ಜೂ.28 : ಕೋವಿಡ್-19 ಸೋಂಕು ಹರಡಿರುವ ಹಿನ್ನೆಲೆ ಕರ್ಕಳ್ಳಿ-ಬಳಗುಂದ ಗ್ರಾಮದ ಸೀಲ್‍ಡೌನ್ ಆದ ಕಂಟೇನ್ಮೆಂಟ್ ನಿವಾಸಿಗಳಿಗೆ ತಾಲೂಕು ಆಡಳಿತದ ವತಿಯಿಂದ ಭಾನುವಾರ ದಿನಬಳಕೆಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
 ಪಟ್ಟಣ ಪಂಚಾಯಿತಿಯ 65, ನೇರುಗಳಲೆ ಗ್ರಾ.ಪಂ ನ 40, ಬೇಳೂರು ಗ್ರಾ.ಪಂ. ವ್ಯಾಪ್ತಿಯ 231 ಒಟ್ಟು 336 ಮನೆಗಳಿಗೆ ಕಿಟ್ ವಿತರಿಸಲಾಯಿತು. ಕರೊನಾ ಸೇನಾನಿಗಳಾದ ಬೇಳೂರು ಪಂಚಾಯಿತಿ ಸದಸ್ಯೆ ಸುಭದ್ರ, ಬಿಲ್ ಕಲೆಕ್ಟರ್ ರಶೀದ್, ವಾಟರ್‍ಮೆನ್‍ಗಳಾದ ಅಣ್ಣು, ಶಂಕರ ಹಾಗು ಮೂರ್ತಿ ಅವರುಗಳು ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.