ಕೊರೋನಾ ಸೋಂಕಿತರಿಗೆ, ಶಂಕಿತರಿಗೆ ಸ್ಪಿರುಲಿನಾ ಚಿಕ್ಕಿ ವಿತರಣೆ

28/06/2020

ಮಡಿಕೇರಿ ಜೂ.28 : ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸ್ಪಿರುಲಿನಾ ಚಿಕ್ಕಿಯನ್ನು ತುಮಕೂರುವಿನ ಸ್ಪಿರುಲಿನಾ ಫೌಂಡೇಷನ್ ವತಿಯಿಂದ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಸಂಸ್ಥೆಯ ಪ್ರಮುಖ ಅಮ್ಮೆಕಂಡ ಕಿರಣ್ ಕುಟ್ಟಪ್ಪ 260 ಸ್ಪಿರುಲಿನಾ ಚಿಕ್ಕಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಮೂಲಕ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು.
ಸ್ಪಿರುಲಿನಾ ಸೂಕ್ಷ್ಮಣು ಜೀವಿಯಾಗಿದ್ದು, ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದರಿಂದ ಬೇರೆಲ್ಲಾ ಆಹಾರಹಗಿಂತ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಇದರಿಂದ ವೈರಾಣು ಸೋಂಕು ತಡೆಯುವಲ್ಲಿ ಯಶಸ್ವಿಯಾಗುತ್ತದೆ. ಈ ಬಗ್ಗೆ ಸಂಶೋಧನೆ ಕೂಡ ನಡೆದು ದೃಢವಾಗಿದೆ. ಕೊರೋನಾ ವಾರಿಯರ್ಸ್, ಕೊರೋನಾ ಸೋಂಕಿತರು, ಶಂಕಿತರಿಗೆ ಚಿಕ್ಕಿಯನ್ನು ವಿತರಿಸಲಾಗಿದೆ ಎಂದು ಕಿರಣ್ ಕುಟ್ಟಪ್ಪ ಮಾಹಿತಿ ನೀಡಿದರು.