ಪಾಕ್ ಗೆ ಭಾರತ ತಿರುಗೇಟು

June 29, 2020

ನವದೆಹಲಿ ಜೂ.29 : ಸಿಖ್ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಜೂ.29ರಿಂದ ಕರ್ತಾರ್ಪುರ ಕಾರಿಡಾರ್’ನ್ನು ತೆರೆಯಲು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಪಾಕಿಸ್ತಾನ ಹೇಳಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ.
ಪಾಕಿಸ್ತಾನ ವಿದೇಶಾಂಗ ಸಚಿವ ಶಾ.ಮಹಮ್ಮೂದ್ ಖುರೇಷಿಯವರು ಟ್ವೀಟ್ ಮಾಡಿದ್ದು ಕರ್ತಾಪುರ ಕಾರಿಡಾರ್ ತೆರೆಯುವ ಬಗ್ಗೆ ತಿಳಿಸಿದ್ದಾರೆ.
ವಿಶ್ವದಾದ್ಯಂತ ಧಾರ್ಮಿಕ ಕೇಂದ್ರಗಳು ಪುರರಾರಂಭಗೊಳ್ಳುತ್ತಿದ್ದಂತೆ, ಕರ್ತಾರ್ಪುರ ಕಾರಿಡಾರ್’ನ್ನು ತೆರೆಯಲು ಪಾಕಿಸ್ದಾನ ಸಿದ್ಥತೆ ನಡೆಸುತ್ತಿದೆ. ಮಹಾರಾಜ ರಂಜೀತ್ ಸಿಂಗ್ ಅವರ ಮರಣ ವರ್ಷಾಚರಣೆಯ ಅಂಗವಾಗಿ ಜೂ.29,2020ರಂದು ಎಲ್ಲಾ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ಪುರ ಸಾಹಿಬ್ ಕಾರಿಡಾರ್’ನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಭಾರತಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದರು.
ಇದಕ್ಕೆ ಭಾರತ ಪಾಕಿಸ್ತಾನ ಇದೀಗ ತಾನು ಸೌಹಾರ್ಧ ಸಂಬಂಧ ಹರಿಕಾರ ಎಂದು ಬಿಂಬಿಸಿಕೊಳ್ಳುವ ನಾಟಕವಾಡುತ್ತಿದೆ. ಸೋಮವಾರದಿಂದ ಕಾರಿಡಾರ್ ಆರಂಭವಾಗುವುದಿದ್ದರೆ ಈ ಮೊದಲೇ ವಿಷಯವನ್ನು ತಿಳಿಸಬೇಕಿತ್ತು ಎಂದು ತಿರುಗೇಟು ನೀಡಿದೆ.

error: Content is protected !!