ಜಿಲ್ಲಾ ಕಾರ್ಯಕ್ರಮ ಸಂಯೋಜಕರ ಹುದ್ದೆಗೆ ಹುದ್ದೆಅರ್ಜಿ ಆಹ್ವಾನ

June 29, 2020

ಮಡಿಕೇರಿ ಜು. 8 : ಪ್ರಧಾನ ಮಂತ್ರಿ ಮಾತೃವಂದನಾ ಮತ್ತು ಪೋಷಣ ಅಭಿಯಾನ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ 18 ರಿಂದ 35 ವರ್ಷ ವಯೋಮಿತಿಗೊಳಪಟ್ಟ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಕಾರ್ಯಕ್ರಮ ಸಂಯೋಜಕರ ಹುದ್ದೆಗೆ, ವಿದ್ಯಾರ್ಹತೆ: ಸಮಾಜ ವಿಜ್ಞಾನ/ ಜೀವ ವಿಜ್ಞಾನ/ ನ್ಯೂಟ್ರಿಷನ್/ ವೈದ್ಯಕೀಯ/ ಆರೋಗ್ಯ ನಿರ್ವಹಣೆ/ ಸಮಾಜ ಕಾರ್ಯ/ ರೂರಲ್ ಮ್ಯಾನೇಜ್‍ಮೆಂಟ್ ಇವುಗಳಲ್ಲಿ ಯಾವುದಾದರೊಂದು ಸ್ನಾತಕೋತ್ತರ ಪದವಿ ಪಡೆದಿರಬೇಕು.
ಸೇವಾ ಅನುಭವ: ಸರ್ಕಾರಿ/ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 1 ವರ್ಷಗಳ ಅನುಭವ, ಎಂ.ಎಸ್. ಆಫೀಸ್ ಬಳಕೆ ಮತ್ತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕ್ಷೇತ್ರ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು. ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿಯಾಗಿರಬೇಕು. ಗೌರವಧನ ಮಾಹೆಯಾನ ರೂ. 35000/-
ವಿರಾಜಪೇಟೆ ತಾಲ್ಲೂಕು ಸಂಯೋಜಕರು: ವಿದ್ಯಾರ್ಹತೆ: ಕಂಪ್ಯೂಟರ್ ಸೈನ್ಸ್ ಅಥವಾ ಐ.ಟಿ. ಪದವಿ ಅಥವಾ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಃಅಂ) ಪದವಿ ಪಡೆದಿರಬೇಕು.
ಸೇವಾ ಅನುಭವ: ಟೆಕ್ನಾಲಜಿ ಅಂಡ್ ಸಾಫ್ಟ್‍ವೇರ್ ಅಪ್ಲಿಕೇಷನ್ ಸಪೋರ್ಟ್‍ನಲ್ಲಿ ಕನಿಷ್ಠ 2 ವರ್ಷಗಳು ಕೆಲಸ ನಿರ್ವಹಿಸಿದ ಅನುಭವ ಇರಬೇಕು.
ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕ್ಷೇತ್ರ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು. ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿಯಾಗಿರಬೇಕು. ಗೌರವಧನ ಮಾಹೆಯಾನ ರೂ. 20000/-
ಆಸಕ್ತ ಅರ್ಹ ಅಭ್ಯರ್ಥಿಗಳು ಸ್ವವಿವರವನ್ನು (Resume)ಅನ್ನು ಎಲ್ಲಾ ದೃಢೀಕೃತ ದಾಖಲೆಗಳೊಂದಿಗೆ ಜುಲೈ 15 ರ ಸಂಜೆ 5 ಗಂಟೆಯೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ. ಈ ವಿಳಾಸಕ್ಕೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08272-298379 ಅನ್ನು ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.