ಮಡಿಕೇರಿ ನಗರದ ಗೌಳಿಬೀದಿ ಜನರಲ್ಲಿ ಒಂದು ಕ್ಷಣ ಆತಂಕ ಮೂಡಿಸಿತು ಆ ಶಬ್ಧ …

29/06/2020

ಮಡಿಕೇರಿ ಜೂ.29 : ಮಡಿಕೇರಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನಗರದ ಗೌಳಿಬೀದಿಯಲ್ಲಿ ಭಾರೀ ಶಬ್ದದೊಂದಿಗೆ ಬರೆ ಮತ್ತು ತಡೆಗೋಡೆ ಕುಸಿತವಾಗಿದೆ. ಕಳೆದ ಒಂದು ವಾರದಿಂದ ತುಂತುರು ಮಳೆಯ ವಾತಾವರಣದಲ್ಲಿದ್ದ ಮಡಿಕೇರಿಯಲ್ಲಿ ಇಂದು ಮುಂಗಾರು ಚುರುಕುಗೊಂಡಿದೆ. ಮಧ್ಯಾಹ್ನದ ನಂತರ ನಿರಂತರವಾಗಿ ಮಳೆಯಾಗುತ್ತಿದ್ದು, ಗೌಳಿಬೀದಿ ಜನರಲ್ಲಿ ಒಂದು ಕ್ಷಣ ಆತಂಕ ಮೂಡಿತು.