ಲಾಕ್ ಡೌನ್ ಡೈರಿ ಪುಸ್ತಕ ಲೋಕಾರ್ಪಣೆ

30/06/2020

ಮಡಿಕೇರಿ ಜೂ.30 : ಕೊರೋನಾ ಲಾಕ್ ಡೌನ್ ದಿನಗಳ ಸಂಕಷ್ಟದ ಕ್ಷಣಗಳ ಸರಮಾಲೆಯ ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ರಚಿತ “ಲಾಕ್ ಡೌನ್ ಡೈರಿ” ಪುಸ್ತಕವನ್ನು ಮಡಿಕೇರಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು. ವಿಜಯ ವಿನಾಯಕ ದೇವಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ
ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಪುಸ್ತಕವನ್ನು ಅನಾವರಣಗೊಳಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಆರ್.ಕುಟ್ಟಪ್ಪ, ಹಿರಿಯ ಪತ್ರಕರ್ತರುಗಳಾದ ಜಿ.ಚಿದ್ವಿಲಾಸ್, ಬಿ.ಜಿ.ಅನಂತಶಯನ ಮತ್ತಿತರರು ಹಾಜರಿದ್ದರು. ಲಾಕ್ ಡೌನ್ ಅವಧಿಯ ಹಲವು ವಿದ್ಯಮಾನಗಳು ಕೃತಿಯಲ್ಲಿ ದಾಖಲಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಇರಬೇಕಾದ ಕೃತಿ ಇದು. ಭವಿಷ್ಯದಲ್ಲಿ ಇದು ಹೆಚ್ಚಿನ ಮಹತ್ವದ ಕೃತಿಯಾಗಲಿದೆ. ಒಂದು ಪುಸ್ತಕ ದ ದರ 150 ರೂಪಾಯಿ. ಜಿ.ಚಿದ್ವಿಲಾಸ್, ರಂಜಿತ್ ಕವಲಪಾರ, ಎನ್.ಸಿ. ಪ್ರಜ್ವಲ್, ಕಾಯಪಂಡ ಶಶಿ ಸೋಮಯ್ಯ, ಬಿ.ಕೆ. ರವೀಂದ್ರ ರೈ, ಮಾದೇಟಿರ ಬೆಳ್ಯಪ್ಪ, ಡಾ.ಬಿ.ಸಿ. ನವೀನ್ ಕುಮಾರ್, ಕೆ.ಕೆ. ನಾಗರಾಜಶೆಟ್ಟಿ, ರಫೀಕ್ ತೂಚಮಕೇರಿ, ಡಾ.ಕೆ.ಎಸ್. ಚೈತ್ರಾ, ಡಾ.ಸಿ. ರವೀಂದ್ರನಾಥ್ ಅವರು ಬರೆದ ವಿಶೇಷ ಲೇಖನ ಲಾಕ್ ಡೌನ್ ಡೈರಿಯಲ್ಲಿ ಇದೆ. ಎಚ್.ಟಿ. ಅನಿಲ್ ಅವರ ಮೊಬೈಲ್ ಸಂಖ್ಯೆ 9844060174, 9272707447.