ಟ್ರಂಪ್ ಬಂಧನಕ್ಕೆ ಇರಾನ್ ವಾರೆಂಟ್

30/06/2020

ತೆಹ್ರನ್ ಜೂ.30 : ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕಾಗಿ ಇರಾನ್ ವಾರೆಂಟ್ ಹೊರಡಿಸಿದ್ದು, ಇಂಟರ್ ಪೋಲ್ ಸಹಾಯ ಕೇಳಿದೆ.
ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜನವರಿಯಲ್ಲಿ ಡ್ರೋನ್ ದಾಳಿ ನಡೆಸಿ ಜನರಲ್ ಸೂಲೈಮನ್ ಮತ್ತಿತರ ಸಾವಿಗೆ ಕಾರಣವಾಗಿರುವ ಡೊನಾಲ್ಡ್ ಟ್ರಂಪ್ ಹಾಗೂ ಇತರ ಡಜನ್ ವ್ಯಕ್ತಿಗಳ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ಒಬ್ಬರು ಇಂದು ಹೇಳಿದ್ದಾರೆ.
ಜನವರಿಯಲ್ಲಿ ಮೂರು ದಾಳಿ ನಡೆಸಿ ಜನರಲ್ ಆಗಿದ್ದ ಖಾಸಿಂ ಸೂಲೈಮನ್ ಹತ್ಯೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಹಾಗೂ ಇತರ 30ಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳನ್ನಾಗಿ ಇರಾನ್ ಮಾಡಿದ್ದು, ಹತ್ಯೆ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ ಎಂದು ತೆಹ್ರನ್ ಪ್ರಾಸಿಕ್ಯೂಟರ್ ಅಲಿ ಅಲ್ಕಾಸಿಮೆಹ್ರ್ ಹೇಳಿರುವುದಾಗಿ ಐಎಸ್‍ಎನ್ ಎ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಟ್ರಂಪ್ ಹೊರತುಪಡಿಸಿ ಬೇರೆಯವರನ್ನು ಅಲ್ಕಾಸಿಮೆಹರ್ ಗುರುತಿಸಲಿಲ್ಲ, ಆದರೆ, ಟ್ರಂಪ್ ಅಧ್ಯಕ್ಷ ಸ್ಥಾನ ಮುಗಿದ ನಂತರವೂ ಇರಾನ್ ತನ್ನ ಪ್ರಕರಣವನ್ನು ಮುಂದುವರೆಸಲಿದೆ ಎಂದು ಅಲಿ ಹೇಳಿದ್ದಾರೆ.