ಹೈಕೋರ್ಟ್‍ಗೂ ಕೊರೋನಾ ಭೀತಿ

01/07/2020

ಬೆಂಗಳೂರು ಜು. 1 : ರಾಜ್ಯ ಹೈಕೋರ್ಟ್‍ಗೂ ಈಗ ಕೊರೋನಾ ಭೀತಿ ಆವರಿಸಿದೆ. ಮಂಗಳವಾರ ನಿಗದಿಯಾಗಿದ್ದ ಕಾರ್ಯಕಲಾಪಗಳನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ.
ಸಿಬ್ಬಂದಿಗೂ ಒಂದು ದಿನ ರಜೆ ಘೋಷಣೆ ಮಾಡಿದ್ದು, ಇಡೀ ಹೈಕೋರ್ಟ್ ಸ್ಯಾನಿಟೈಸ್ ಮಾಡಲಾಗುವುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದರೆ. ಆದರೆ, ಈ ಹಠಾತ್ ಬೆಳವಣಿಗೆ ಸ್ಪಷ್ಟ ಕಾರಣ ಬಹಿರಂಗಪಡಿಸಿಲ್ಲ.
ಜೊತೆಗೆ, ಕೊರೋನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಹೈಕೋರ್ಟ್‍ನ ಬೆಂಗಳೂರು ಪ್ರಧಾನ ಪೀಠದಲ್ಲಿ ತೆರೆದ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ತುರ್ತು ವಿಚಾರಣೆಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ.
ಧಾರವಾಡ ಹಾಗೂ ಕಲಬುರ್ಗಿ ಪೀಠಗಳಲ್ಲಿ ಮಾರ್ಗಸೂಚಿ ಅನುಸಾರ ಕಲಾಪಗಳು ನಡೆಯಲಿವೆ.