ಭಾರತವನ್ನು ಹೊಣೆ ಮಾಡಿದ ಪಾಕ್

01/07/2020

ಇಸ್ಲಾಮಾಬಾದ್ ಜು. 1 : ದೇಶದ ಅತಿದೊಡ್ಡ ನಗರ ಕರಾಚಿಯಲ್ಲಿ ಪಾಕಿಸ್ತಾನ ಸ್ಟಾಕ್ ಎಕ್ಸ್ ಚೇಂಜ್ (ಪಿಎಸ್‍ಎಕ್ಸ್) ಮೇಲೆ ಇತ್ತೀಚೆಗೆ ನಡೆದ ದಾಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ.
ಪಾಕಿಸ್ತಾನದ ಜಿಯೋ ಟಿವಿ ಪ್ರಸಾರಕರು ಉಲ್ಲೇಖಿಸಿದಂತೆ ಭಾರತ ಈ ದಾಳಿಯಲ್ಲಿ ಭಾಗಿಯಾಗಿದೆ ಎಂಬುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ ಎಂದು ಖಾನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಪಿಎಸ್‍ಎಕ್ಸ್ ಕಟ್ಟಡದಲ್ಲಿ ಉಗ್ರರು ವಿವೇಚನೆಯಿಲ್ಲದೆ ಗುಂಡು ಹಾರಿಸಿದಾಗ ಕನಿಷ್ಠ ಏಳು ಜನರು ಸಾವನ್ನಪಪ್ಪಿ, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ ಭಾಗಿಯಾದ ನಾಲ್ವರು ದಾಳಿಕೋರರನ್ನು ಪೊಲೀಸರು ಕೊಂದಿದ್ದಾರೆ.
ಉಗ್ರರು ಪೊಲೀಸ್ ಅಧಿಕಾರಿಗಳ ವೇಷ ಧರಿಸಿ, ಬಹುಶಃ ಸ್ಫೋಟಕಗಳನ್ನು ಹೊಂದಿದ್ದ ಚೀಲವನ್ನು ಹೊತ್ತೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.