ಭಾರತೀಯ ಆಪ್ ಗಳಿಗೆ ಬೇಡಿಕೆ

July 1, 2020

ಬೆಂಗಳೂರು ಜು. 1 : ಭಾರತದಲ್ಲಿ ಟಿಕ್ ಟಾಕ್ ನಿಷೇಧಗೊಂಡ ಬೆನ್ನಲ್ಲೇ, ಅದೇ ಮಾದರಿಯ ಭಾರತೀಯ ಆಪ್ ಗಳಿಗೆ ಬೇಡಿಕೆ ಹೆಚ್ಚಿದೆ. ಈ ಪೈಕಿ ಅತ್ಯಂತ ಲಾಭ ಪಡೆದಿರುವುದು ಬೆಂಗಳೂರು ಮೂಲದ ಯುವಕರು ಪ್ರಾರಂಭಿಸಿರುವ ಚಿಂಗಾರಿ ಆಪ್.
ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಚಿಂಗಾರಿ ಆಪ್ ಡೌನ್ ಲೋಡ್ ಗೆ ಜನರು ಮುಗಿಬಿದ್ದಿದ್ದು ಪ್ರತಿ ಗಂಟೆಗೆ 1 ಲಕ್ಷ ಡೌನ್ ಲೋಡ್ ಹಾಗೂ 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.
ಟಿಕ್ ಟಾಕ್ ನಿಷೇಧಕ್ಕೂ ಮುನ್ನವೇ ಚಿಂಗಾರಿ ಆಪ್ ನ್ನು 3 ಮಿಲಿಯನ್ ಬಾರಿ ಡೌನ್ ಲೋಡ್ ಆಗಿತ್ತು. ಬೆಂಗಳೂರು ಮೂಲದ ಯುವಕರಾದ ಸಿದ್ಧಾರ್ಥ್ ಗೌತಮ್ ಹಾಗೂ ಬಿಸ್ವಾತ್ಮ ನಾಯಕ್ ಎಂಬುವವರು ಟಿಕ್ ಟಾಕ್ ಗೆ ಪರ್ಯಾಯವಾಗಿ ಚಿಂಗಾರಿ ಆಪ್ ನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದರು. ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮುಂಚೂಣಿಯಲ್ಲಿದ್ದು ಇದೇ ಮಾದರಿಯ ಮಿತ್ರೋ ಆಪ್ ನ್ನೂ ಹಿಂದಿಕ್ಕಿದೆ.
ಟಿಕ್ ಟಾಕ್ ಗೆ ಪರ್ಯಾಯವಾದ ಭಾರತದ್ದೇ ಆದ ಆಪ್ ಇದೆ ಎಂಬ ಪ್ರಚಾರ ದೊರೆತ ಬೆನ್ನಲ್ಲೇ ನಮ್ಮ ನಿರೀಕ್ಷೆಗೂ ಮೀರಿದ ಟ್ರಾಫಿಕ್ ಬಂದಿದೆ, ಚಿಂಗಾರಿ ಆಪ್ ಗೆ ಹೂಡಿಕೆಯೂ ಹರಿದುಬರುತ್ತಿದ್ದು, ಮಹತ್ವದ ಮಾತುಕತೆಗಳು ನಡೆಯುತ್ತಿದೆ ಎಂದು ಸ್ಥಾಪಕರಲ್ಲಿ ಒಬ್ಬರಾದ ನಾಯಕ್ ತಿಳಿಸಿದ್ದಾರೆ.