ಪ್ರಾಕೃತಿಕ ವಿಕೋಪ ಪ್ರದೇಶಗಳಿಗೆ ನೂತನ ಎಸ್ ಪಿ ಕ್ಷಮಾ ಮಿಶ್ರಾ ಭೇಟಿ

01/07/2020

ಮಡಿಕೇರಿ ಜು. 1 : ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದಂತಹ ಪ್ರಕೃತಿ ವಿಕೋಪಗಳ ಸಂಬಂಧ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈ ಹಿಂದಿನ ಮಳೆಗಾಲಗಳಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದ್ದ ಸ್ಥಳಗಳಾದ ಮಡಿಕೇರಿ ತಾಲೋಕಿನ ಮಕ್ಕಂದೂರು ಮತ್ತು ಉದಯಗಿರಿ ಹಾಗು ಸೋಮವಾರಪೇಟೆ ತಾಲೋಕಿನ ಹಾಲೇರಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.