ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 60 ಕ್ಕೆ ಏರಿಕೆ : 3 ತಿಂಗಳ ಮಗುವನ್ನೂ ಕಾಡಿದ ವೈರಸ್

01/07/2020

ಮಡಿಕೇರಿ ಜು.1 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರ 13 ಪ್ರಕರಣಗಳು ಪತ್ತೆಯಾಗಿವೆ. ಮೂರು ತಿಂಗಳ ಮಗುವನ್ನು ಕೂಡ ವೈರಸ್ ಕಾಡಿದ್ದು, ಸೋಂಕಿತರ ಸಂಖ್ಯೆ 60 ಕ್ಕೆ ಏರಿಕೆಯಾಗಿದೆ.
ವಿರಾಜಪೇಟೆ ತಾಲ್ಲೂಕು ಹುಂಡಿ ಗ್ರಾಮದ 3 ತಿಂಗಳ ಮಗು ಮತ್ತು 6 ವರ್ಷದ ಮಗುವಿನಲ್ಲಿ, 56 ಹಾಗೂ 87 ವರ್ಷದ ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆ ತಾಲ್ಲೂಕು ಬಳಗುಂದ ಗ್ರಾಮದ 47 ವರ್ಷದ ಪುರುಷ,
37 ವರ್ಷದ ಮಹಿಳೆ, ನೆಲ್ಲಿಹುದಿಕೇರಿ ಗ್ರಾಮದ 61, 43 11, 38, 29 ವರ್ಷದ ವ್ಯಕ್ತಿಗಳಲ್ಲಿ, ಶಿರಂಗಾಲ ಗ್ರಾಮದ ಗುಂಡೂರಾವ್ ಬಡಾವಣೆಯ 47 ವರ್ಷದ ವ್ಯಕ್ತಿ ಮತ್ತು ವಿರಾಜಪೇಟೆ ತಾಲ್ಲೂಕು ತಿತಿಮತಿ ಗ್ರಾಮದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 60 ಕ್ಕೆ ಏರಿಕೆಯಾಗಿದ್ದು, ಇವರುಗಳಲ್ಲಿ ಮೂವರು ಗುಣಮುಖರಾಗಿದ್ದಾರೆ. ಉಳಿದ 57 ಮಂದಿಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು 24 ಆಗಿದೆ.