ಹಿಂದೂ ಪರಿಷತ್ ವೆಬ್‍ಸೈಟ್ ಹ್ಯಾಕ್

02/07/2020

ನವದೆಹಲಿ ಜು.2 : ಅತ್ಯಂತ ಪ್ರಭಾವಶಾಲಿ ಆರ್‍ಎಸ್‍ಎಸ್ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್‍ನ ವೆಬ್‍ಸೈಟ್ ಅನ್ನು ಬುಧವಾರ ಹ್ಯಾಕ್ ಮಾಡಲಾಗಿದ್ದು ಕಾಶ್ಮೀರ ಪರ ಘೋಷಣೆ ಪೋಸ್ಟ್ ಮಾಡಲಾಗಿದೆ.
ವೆಬ್‍ಸೈಟ್ ನ ಮುಖಪುಟದಲ್ಲಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ್ದು, ಆಡಳಿತಾರೂಢ ಬಿಜೆಪಿಯ ವಿರುದ್ಧ ಧ್ವನಿ ಎತ್ತಿ ಎಂದು ಸ್ಪಷ್ಟ ಕರೆ ನೀಡಲಾಗಿದೆ. ಹ್ಯಾಕ್ ಮಾಡಲಾದ ವೆಬ್‍ಸೈಟ್‍ನ ಸ್ಕ್ರೀನ್‍ಶಾಟ್ ನಲ್ಲಿ ಇದು “ಕಾಶ್ಮೀರಿಗಳಿಗೆ” ಎಂದು ಬರೆಯಲಾಗಿದೆ.
ಭಾರತ ಸರ್ಕಾರವು ಕಳೆದ ವರ್ಷ 370ನೇ ವಿಧಿಯನ್ನು ರದ್ದುಗೊಳಿಸಿತು. ಈ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಸಂಯೋಜನೆಗೊಳ್ಳಲು ವಿಶೇಷ ಸ್ಥಾನಮಾನವನ್ನು ನೀಡಿತು.
ಹ್ಯಾಕ್ ಮಾಡಲಾದ ವಿಎಚ್‍ಪಿ ವೆಬ್‍ಸೈಟ್‍ನ ಮುಖಪುಟದಲ್ಲಿ ಲವ್ ಜಿಹಾದ್ ನಂತಹ ಪೋಸ್ಟ್ ಏನೂ ಇಲ್ಲ ಎಂದು ಹೇಳಿಕೊಂಡಿದೆ.