ಮರಳಿ ಗೂಡಿಗೆ ಸಾಂತ್ವನ ಕಾರ್ಯಕ್ರಮ : ಯು.ಎ.ಇ‌ ಯಿಂದ ತಾಯ್ನಾಡು ತಲುಪಿದ 168 ಕನ್ನಡಿಗರು

02/07/2020

ಮಡಿಕೇರಿ ಜು. 2 : ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ, ಜಿ.ಸಿ.ಸಿ ಘಟಕ‌ ಕೊಡಗು ಇವರ ಸಹಭಾಗಿತ್ವದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು “ಮರಳಿ ಗೂಡಿಗೆ ಸಾಂತ್ವನ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು, ಇದೀಗ 168 ಕನ್ನಡಿಗರನ್ನೊಳಗೊಂಡ ವಿಮಾನವು ಯು.ಇ.ಯಿ‌ಂದ , ಬೆಂಗಳೂರಿಗೆ ಪ್ರಯಾಣ ಬೆಳೆಸಿ ಇದೀಗ ಬೆಂಗಳೂರಿಗೆ ನಿಗದಿತ ಸಮಯದಲ್ಲಿ ತಲುಪಿದೆ.
168 ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡು‌ ತಲುಪಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು ಮರಳಿಗೆ ತಾಯ್ನಾಡಿಗೆ ಕಳುಹಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟನೆಯೂ ಯು.ಎ.ಇ ರಸ್ ಅಲ್ ಕೈಮಾ ವಿಮಾನ ನಿಲ್ದಾಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್, ಜಿಸಿಸಿ ಕೊಡಗು ಘಟಕದ ಅಧ್ಯಕ್ಷರಾದ ಹುಸೈನ್ ಫೈಝಿ ವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಹುಸೈನ್ ಫೈಝಿ ಅನಿವಾಸಿ ಕನ್ನಡಿಗರು ಕೊರೊನಾದಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು.
ತಾಯ್ನಾಡಿಗೆ ತೆರಳಲು ಬಯಸಿದ ಕನ್ನಡಿಗರ ಧ್ವನಿಯಾಗಿ ಎಸ್.ಕೆ.ಎಸ್.ಎಸ್.ಎಫ್ , ಹಾಗೂ ಜಿ.ಸಿ.ಸಿ ಕೊಡಗು ಘಟಕ ಕೆಲಸ ನಿರ್ವಹಿಸುತ್ತಿದೆ ಎಂದರು.
ಪ್ರಯಾಣಿಕರು ಯಾವುದೇ ಗೊಂದಲಗಳಿಗೆ ಅನುವು ಮಾಡಿಕೊಡದೆ ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಟ್ಟು, ಕೊರೊನಾ ಮುಕ್ತ, ಜಿಲ್ಲೆ, ರಾಜ್ಯ, ಹಾಗೂ ಕೊರೋನಾ ಮುಕ್ತ ರಾಷ್ಟ್ರ ಮಾಡುವಲ್ಲಿ ಎಸ್.ಕೆ.ಎಸ್.ಎಸ್.ಎಫ್ ನೊಂದಿಗೆ ಕೈ ಜೋಡಿಸಬೇಕೆ ಎಂದು‌ ಹುಸೈನ್ ಫೈಝಿ ಮನವಿ ಮಾಡಿದರು.

ಎಸ್.ಕೆ.ಎಸ್.ಎಸ್.ಎಫ್ ವಿಮಾನದಲ್ಲಿ ಯ.ಎ.ಇ‌ ಯಿಂದ ಪ್ರಯಾಣ ಮಾಡಿಷ ಕೊಡಗು ಜಿಲ್ಲೆಯ ಅನಿವಾಸಿ ನಾಗರಿಕರಿಗೆ ಕೊಡಗು ಜಿಲ್ಲೆಯಲ್ಲಿ, ಸರ್ಕಾರ ಹಾಗೂ ಕೊಡಗು ಜಿಲ್ಲಾಡಳಿತದ ಸಹಕಾರದೊಂದಿಗೆ ಸುರಕ್ಷಿತ ಸ್ಥಳಗಳಲ್ಲಿ ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ವತಿಯಿಂದ ಉತ್ತಮ‌,‌ಸುರಕ್ಷಿತ ಸ್ಥಳಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ಸದ್ಯದಲ್ಲೇ ಸೌದಿ ಅರೇಬಿಯಾದ ರಿಯಾದ್ ನಿಂದ ಮಂಗಳೂರಿಗೆ ಮತ್ತೊಂದು ವಿಮಾನ ಪ್ರಯಾಣ ಬೆಳಸಲಿದೆ ಎಂದು‌ ಹುಸೈನ್ ಫೈಝಿ ತಿಳಿಸಿದರು.

ಯು.ಎ.ಇ ಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ರಫೀಕ್ ಕುಂಜಿಲ ಅವರ ಸೇವೆಯನ್ನು ಗುರುತಿಸಿ ,ಎಸ್.ಕೆ.ಎಸ್.ಎಸ್.ಎಫ್ ಜಿ.ಸಿ.ಸಿ ಕೊಡಗು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ‌ ಸಂದರ್ಭ ಜಿ.ಸಿ.ಸಿ‌ ಕೊಡಗು ಘಟಕದ ಸದಸ್ಯರಾದ ಯಹ್ಯಾ ಕೊಡ್ಲಿಪೇಟೆ, ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಪ್ರಮುಖ ಶಾಫಿ ಪೆರುವಾಯಿ,ಮೀಡಿಯಾ ವಿಂಗ್ ಸದಸ್ಯ ಅಬ್ದುಲ್ ರಜಾಕ್, ಇರ್ಷಾದ್ ಕೂಡಿಗೆ, ಮೀಡಿಯಾ ವಿಂಗ್ ಪ್ರಮುಖ ಶಫೀಖ್ ನೆಲ್ಲಿಹುದಿಕೇರಿ, ಬಷೀರ್ ಚೇರಂಬಾಣೆ, ರಶೀದ್ ವಾಲ್ನೂರು-ತ್ಯಾಗತ್ತೂರು, ಖಮರುದ್ದೀನ್ ಸೌದಿ, ರಜಾಕ್ ಫೈಜಿ ಹಾಗೂ ಜಿ.ಸಿ.ಸಿ ಕೊಡಗು ಘಟಕದ ಸದಸ್ಯರು ಇದ್ದರು.