ನಿಯಂತ್ರಣ ತಪ್ಪಿ ಪ್ರವಾಸಿಗರ ವಾಹನ ಪಲ್ಟಿ : ಸಿದ್ದಾಪುರದ ಕಾನನ್‍ಕಾಡು ಬಳಿ ಘಟನೆ

02/07/2020

ಮಡಿಕೇರಿ ಜು. 2 : ಧಾರಾಕಾರ ಮಳೆಯಿಂದಾಗಿ ಪ್ರವಾಸಿಗರ ವಾಹನವೊಂದು ನಿಯಂತ್ರಣ ತಪ್ಪಿ ತೋಟದೊಳಗೆ ಮಗುಚಿಕೊಂಡ ಘಟನೆ ಸಿದ್ದಾಪುರದ ಕನನ್‍ಕಾಡು ಬಳಿ ನಡೆದಿದೆ.
ಅಭ್ಯತ್‍ಮಂಗಲ ಸುತ್ತಮುತ್ತ ಸಂಜೆ ವೇಳೆ ಧಾರಾಕಾರ ಮಳೆಯಾಗಿದ್ದು, ಈ ಸಂದರ್ಭ ರಸ್ತೆಯಲ್ಲಿ ಸಾಗುತ್ತಿದ್ದ ಪ್ರವಾಸಿಗರ ಇನೋವ ವಾಹನ (ಕೆಎ-51-2278) ಚಾಲಕನ ನಿಯಂತ್ರಣ ತಪ್ಪಿ ಕಾನನ್‍ಕಾಡು ಬಳಿಯ ಟಾಟಾ ಸಂಸ್ಥೆಯ ತೋಟದೊಳಗೆ ಮಗುಚಿಕೊಂಡಿದೆ.
ಕಾರಿನೊಳಗೆ ಐವರು ಪ್ರಯಾಣಿಕರಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಧಾವಿಸಿ ಪ್ರವಾಸಿಗರನ್ನು ಬೇರೆ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.