ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 72 ಕ್ಕೆ ಏರಿಕೆ : ಮಡಿಕೇರಿ ನವೋದಯ ವಿದ್ಯಾಲಯದ ಸಿಬ್ಬಂದಿಗಳನ್ನು ಕಾಡಿದ ಕೊರೋನಾ

02/07/2020

ಮಡಿಕೇರಿ ಜು.2 : ಕೊಡಗು ಜಿಲ್ಲೆಯಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 72 ಕ್ಕೆ ಏರಿಕೆಯಾಗಿದೆ.
ಗೋಣಿಕೊಪ್ಪದ ಕೆ.ಇ.ಬಿ ರಸ್ತೆಯ 30 ವರ್ಷದ ಮಹಿಳೆ, 4 ತಿಂಗಳ ಹೆಣ್ಣು ಮಗು, 4 ವರ್ಷದ ಹೆಣ್ಣು ಮಗು ಹಾಗೂ 8 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ನವೋದಯ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಪ್ರದೇಶದ 35 ವರ್ಷದ ಪುರುಷ, ರಾಜಸ್ಥಾನದ 40 ವರ್ಷದ ಪುರುಷ, 35 ಮತ್ತು 23 ವರ್ಷದ ಮಹಿಳೆ, ಮಡಿಕೇರಿಯಲ್ಲಿ ವಾಸವಿರುವ ಪಂಜಾಬ್ ರಾಜ್ಯದ 16 ವರ್ಷದ ಬಾಲಕಿಯಲ್ಲಿ ಸೋಂಕು ಕಂಡು ಬಂದಿದೆ.
ಮಡಿಕೇರಿ ನಗರದ ಡೈರಿ ಫಾರಂ ಬಡಾವಣೆಯ ಆರೋಗ್ಯ ಕಾರ್ಯಕರ್ತರೊಬ್ಬರ 16 ವರ್ಷದ ಮಗನಿಗೆ ಸೋಂಕು ದೃಢಪಟ್ಟಿದೆ.
ನಗರದ ಚಾಮುಂಡೇಶ್ವರಿ ನಗರದ ನಿವಾಸಿಯಾಗಿರುವ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಹಾಗೂ ಮಡಿಕೇರಿ ತಾಲ್ಲೂಕು ಹೆಬ್ಬೆಟ್ಟಗೇರಿ ಗ್ರಾಮದ 48 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 72 ಕ್ಕೆ ಏರಿಕೆಯಾಗಿದ್ದು, ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಉಳಿದ 69 ಮಂದಿ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ 26 ಆಗಿದೆ ಎಂದು ಅವರು ಹೇಳಿದ್ದಾರೆ.