ಒಂದೇ ದಿನ ಬೆಂಗಳೂರಿನಲ್ಲಿ 889 ಪ್ರಕರಣ
03/07/2020

ಬೆಂಗಳೂರು ಜು.3 : ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಒಂದೇ ದಿನ ಬೆಂಗಳೂರಿನಲ್ಲಿ 889 ಮತ್ತು ಒಟ್ಟಾರೆ ರಾಜ್ಯದಲ್ಲಿ 1,502 ಪ್ರಕರಣಗಳು ಪತ್ತೆಯಾಗಿವೆ.
ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 272ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಬೆಂಗಳೂರಿನಲ್ಲಿ 889 ಸೇರಿದಂತೆ ದಕ್ಷಿಣ ಕನ್ನಡದಲ್ಲಿ 90, ಮೈಸೂರಿನಲ್ಲಿ 68, ಬಳ್ಳಾರಿಯಲ್ಲಿ 65, ಧಾರವಾಡದಲ್ಲಿ 47, ವಿಜಯಪುರದಲ್ಲಿ 39, ರಾಮನಗರದಲ್ಲಿ 39, ಕಲಬುರಗಿಯಲ್ಲಿ 38, ಬೀದರ್‍ನಲ್ಲಿ 32, ತುಮಕೂರಿನಲ್ಲಿ 26, ಶಿವಮೊಗ್ಗದಲ್ಲಿ 23, ಮಂಡ್ಯದಲ್ಲಿ 19, ಉತ್ತರಕನ್ನಡದಲ್ಲಿ 17, ಹಾಸನದಲ್ಲಿ 15, ಉಡುಪಿಯಲ್ಲಿ 14 ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಹೊಸದಾಗಿ 1,502 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 18,016ಕ್ಕೆ ಏರಿಕೆಯಾಗಿದೆ.
