ತೃತೀಯ ಲಿಂಗಿಗಳಿಗೆ ಪೊಲೀಸ್ ಹುದ್ದೆ

ನವದೆಹಲಿ ಜು.2 : ತೃತೀಯ ಲಿಂಗಿಗಳಿಗೆ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಶೀಘ್ರವೇ ಕಾರ್ಯಸಾಧು ಆಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ತೃತ್ತೀಯ ಲಿಂಗಿಗಳ ಭದ್ರತೆಯ ಹಕ್ಕುಗಳ ಕಾಯ್ದೆಗೆ ಡಿಸೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿದ್ದು, ಈ ಮೂಲಕ ತೃತೀಯ ಲಿಂಗಿಗಳೂ ಸಹ ಯುಪಿಎಸ್ ಸಿ ಪರೀಕ್ಷೆಗಳಿಗೆ ಹಾಜರಾಗಿ ಕೇಂದ್ರ ಅರೆಸೇನಾಪಡೆಗಳ ನೇಮಕಾತಿಗೆ ಪ್ರಯತ್ನಿಸಬಹುದಾದ ಅವಕಾಶ ಲಭ್ಯವಾಗಲಿದೆ.
ತೃತೀಯ ಲಿಂಗಿಗಳನ್ನು ಅರೆಸೇನಾಪಡೆಗಳಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ 5 ಅರೆಸೆನಾಪಡೆಗಳಿಂದ ನಿಗದಿತ ಕಾಲಾವಕಾಶದಲ್ಲಿ, ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸುವ ಪರವಾದ ಅಭಿಪ್ರಾಯ ಅಥವಾ ಸಕಾರಣ ವಿರೋಧ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರಿದೆ.
ಈ ಅಭಿಪ್ರಾಯಗಳನ್ನು ಸಂಗ್ರಹಿಸಿ ಯುಪಿಎಸ್ ಸಿ ಪರೀಕ್ಷೆಗಳಲ್ಲಿ ತೃತೀಯ ಲಿಂಗಿಗಳಿಗೆ ಅರೆಸೇನಾಪಡೆಗಳಿಗೆ ನೇಮಕವಾಗುವ ಅವಕಾಶ ಕಲ್ಪಿಸುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಇದಕ್ಕೂ ಮುನ್ನ ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಳ್ಳುವುದರಿಂದ ಉಂಟಾಗಬಹುದಾದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಿಎಪಿಎಫ್ ನ ಕಮಾಂಡರ್ ಮಾಹಿತಿ ನೀಡಿದ್ದಾರೆ.
