ಕಥಾ ಮತ್ತು ಕವಿತೆ ಸ್ಪರ್ಧೆ : ಆ. 8 ಕೊನೆಯ ದಿನ

ಮಡಿಕೇರಿ ಜು.2 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಇದರ ವತಿಯಿಂದ ಅರೆಭಾಷೆ ಕಥೆ ಮತ್ತು ಕವಿತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಕಥಾ ಮತ್ತು ಕವಿತೆ ಸ್ಪರ್ಧೆಯ ನಿಯಗಳು ಈ ಇಂತಿವೆ. ಕತೆ ಮತ್ತು ಕವಿತೆ ನಿಮ್ಮ ಸ್ವಂತ ರಚನೆಯಾಗಿರಲಿ, ಪ್ರಕಟಿತ ಮತ್ತು ಅನುವಾದಿತ ಬರಹಗಳಿಗೆ ಅವಕಾಶವಿಲ್ಲ. ಕತೆ ಒಂದು ಸಾವಿರ ಪದಗಳ ಮೀರದಂತಿರಲಿ. ಕವಿತೆ 30 ಸಾಲುಗಳ ಮಿತಿಯಲ್ಲಿರಲಿ, ಹೊಸ ಆಲೋಚನೆ, ಹೊಸ ಹೊಳಹುಗಳ ಬರಹ ನಿಮ್ಮದಾಗಿರಲಿ.
ಮೊದಲ ಬಹುಮಾನಿತ ಕತೆಗೆ ರೂ. 5 ಸಾವಿರ, ದ್ವೀತಿಯ ಬಹುಮಾನ ರೂ 3 ಸಾವಿರ, ತೃತೀಯ ಬಹುಮಾನ ರೂ.1 ಸಾವಿರ, ಮೊದಲ ಬಹುಮಾನಿತ ಕವಿತೆಗೆ ರೂ 3 ಸಾವಿರ, ದ್ವಿತೀಯ ಬಹುಮಾನ ರೂ 2 ಸಾವಿರ, ತೃತೀಯ ಬಹುಮಾನ ರೂ. 1 ಸಾವಿರ. ಒಬ್ಬರೇ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ತೀರ್ಪುಗಾರರ ತೀರ್ಮಾನವೇ ಅಂತಿಮ. ಬರಹ ಕಳಿಸಲು ಆಗಸ್ಟ್, 08 ಕೊನೆಯ ದಿನವಾಗಿದೆ. ನಂತರ ಬಂದ ಬರಹಗಳನ್ನು ಪರಿಗಣಿಸುವುದಿಲ್ಲ.
ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ ದೂ: 08272-223055 ಇಲ್ಲಿಂದ ಪಡೆದುಕೊಳ್ಳಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.
