ಕೋವಿಡ್ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಮುಂಚೂಣಿ

03/07/2020

ಮಡಿಕೇರಿ ಜು.3 : ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಾರ್ವಜನಿಕರ ಆರೋಗ್ಯದ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಮತ್ತು ನಿಯಮಗಳನ್ನು ಜಾರಿಗೊಳಿಸಿದೆ.
ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತವು ಸಹ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ಮತ್ತು ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಅತೀ ಹೆಚ್ಚು ಕೊರೊನ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಸಂಬಂಧ ಕಳೆದ 10 ದಿನಗಳಲ್ಲಿ ಕೋವಿಡ್ ತಪಾಸಣೆ/ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯ ಜನಸಂಖ್ಯೆಯ ಆಧಾರದನ್ವಯ ಗುರುವಾರದ ವೇಳೆಗೆ ಕೊರೊನಾ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ 4,539 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಪಂಚಾಯತ್ ರಾಜ್, ಆರೋಗ್ಯ ಇಲಾಖೆ, ಕಂದಾಯ ಮತ್ತು ಪೆÇಲೀಸ್ ಹೀಗೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂಧಿಗಳು ಜಿಲ್ಲೆಯಲ್ಲಿ ಕೋವಿಡ್-19 ರ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಅಲ್ಲದೆ ಕೋವಿಡ್-19 ರ ಸಂಬಂಧ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಸರ್ಕಾರಿ ಸಂಸ್ಥೆಗಳನ್ನು ಕೋವಿಡ್ ಪ್ರಕರಣಗಳ ಆರೈಕೆ ಕೇಂದ್ರಗಳಿಗಾಗಿ ಗುರುತಿಸಲಾಗಿದೆ
ಜುಲೈ 2 ರಿಂದ ಈ ಕೇಂದ್ರಗಳಲ್ಲಿ ಲಕ್ಷಣ ರಹಿತ ಉತ್ತಮ ಆರೋಗ್ಯ ಸ್ಥಿತಿ ಹೊಂದಿರುವ ಸೋಂಕಿತ ಪ್ರಕರಣಗಳನ್ನು ದಾಖಲಿಸಿ ಆರೈಕೆ ನೀಡಲಾಗುತ್ತದೆ. ಈ ಆರೈಕೆ ಕೇಂದ್ರಗಳಲ್ಲಿ 24*7 ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದು, ಸೋಂಕಿತರ ಆರೈಕೆ ಮಾಡಲಿದ್ದಾರೆ.
ಇದರೊಂದಿಗೆ ಕಂಟೈನ್‍ಮೆಂಟ್ ವಲಯದ ನಿವಾಸಿಗಳಿಗೆ ಜಿಲ್ಲಾಡಳಿತದ ವತಿಯಿಂದ 28 ದಿನಗಳ ಕಾಲ ಅವಶ್ಯಕ ಆಹಾರ ಪದಾರ್ಥಗಳು ಮತ್ತು ಅಗತ್ಯ ಪರಿಕರಗಳನ್ನು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದು, ಸರ್ಕಾರದ ನಿಯಮಾನುಸಾರ ಜಿಲ್ಲಾಡಳಿತ ಸೋಂಕಿತರು ವಾಸವಿದ್ದ ಪ್ರದೇಶವನ್ನು ನಿಯಂತ್ರಿತ ಪ್ರದೇಶ (ಕಂಟೈನ್‍ಮೆಂಟ್ ವಲಯ) ಎಂದು ಘೋಷಣೆ ಮಾಡಿದೆ. ಜಿಲ್ಲೆಯಾದ್ಯಂತ ಶುಕ್ರವಾರ ಬೆಳಗ್ಗೆ 9 ಗಂಟೆಯ ವೇಳೆಗೆ 30 ಕಂಟೈನ್ ಮೆಂಟ್‍ವಲಯಗಳನ್ನು ಘೋಷಿಸಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಒಟ್ಟು 13 ನಿಯಂತ್ರಿತ ಪ್ರದೇಶಗಳನ್ನು ಘೋಷಣೆ ಮಾಡಲಾಗಿದೆ. ನಗರದ ಓಂಕಾರೇಶ್ವರ ದೇವಾಲಯ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ರಸ್ತೆ, ಡೈರಿ ಫಾರಂ, ಪುಟಾಣಿ ನಗರ, ತಾಳತ್‍ಮನೆ ಪ್ರದೇಶ, ಕೊಳಗದಾಳು, ಕಗ್ಗೋಡ್ಲು, ಮೂರ್ನಾಡಿನ ಸುಭಾμï ನಗರ, ಚಾಮುಂಡೇಶ್ವರಿ ನಗರ, ಹೆಬ್ಬೆಟ್ಟಗೇರಿ, ಮಡಿಕೇರಿ ಆಸ್ಪತ್ರೆ ವಸತಿ ಗೃಹ, ಮಹದೇವ ಪೇಟೆ, ಭಗವತಿ ನಗರದಲ್ಲಿ ನಿಯಂತ್ರಿತ ಪ್ರದೇಶವನ್ನು ಘೋಷಿಸಲಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 9 ನಿಯಂತ್ರಿತ ಪ್ರದೇಶಗಳಿವೆ. ಶಿರಂಗಾಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ (ಕರ್ಕಳ್ಳಿ), ಹುಲಸೆ, ರಥ ಬೀದಿ ಕುಶಾಲನಗರ, ಬೆಟ್ಟದಕಾಡು (ನೆಲ್ಲಿಹುದಿಕೇರಿ), ಅಣ್ಣೇಗೌಡ ಬಡಾವಣೆ ಕುಶಾಲನಗರ, ಗುಂಡೂರಾವ್ ಬಡಾವಣೆ ಶನಿವಾರಸಂತೆಯಲ್ಲಿ ಕಂಟೈನ್‍ಮೆಂಟ್ ವಲಯವನ್ನು ಘೋಷಿಸಲಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 8 ನಿಯಂತ್ರಿತ ಪ್ರದೇಶಗಳಿವೆ. ಬಿಟ್ಟಂಗಾಲ, ಪಾಲಿಬೆಟ್ಟ, ಹುಂಡಿ, ವಿರಾಜಪೇಟೆಯ ಮೀನುಪೇಟೆ, ಹೊಲಮಾಳ (ಚೆನ್ನಯ್ಯನ ಕೋಟೆ), ಕೆ.ಇ.ಬಿ ರೋಡ್ (ಗೋಣಿಕೊಪ್ಪ), ತಿತಿಮತಿ, ಶಾಂತಿನಗರ (ವಿರಾಜಪೇಟೆ) ದಲ್ಲಿ ಕಂಟೈನ್‍ಮೆಂಟ್ ವಲಯವನ್ನು ಘೋಷಿಸಲಾಗಿದೆ.