ಪಡಿತರ ಚೀಟಿ ಅಪ್ ಡೇಟ್ ಗೆ ಜು.31 ಕೊನೆ ದಿನ

July 3, 2020

ಮಡಿಕೇರಿ ಜು.3 : ಹೊಸದಾಗಿ ಎಪಿಎಲ್(ಆದ್ಯೇತರ) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಬಂದು ಅನುಮೋದನೆ(ಅಪ್‍ಡೇಟ್) ಮಾಡಿಸಿಕೊಳ್ಳತಕ್ಕದ್ದು. ಹಾಗೂ ಅನುಮೋದನೆ ಮಾಡಿಸಿಕೊಳ್ಳದ ಎಪಿಎಲ್ ಅರ್ಜಿಗಳು ಜುಲೈ, 31 ರೊಳಗೆ ಆಹಾರ ಇಲಾಖೆಯ ಆನ್‍ಲೈನ್ ತಂತ್ರಾಂಶದಿಂದ ರದ್ದಾಗುತ್ತದೆ ಎಂದು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರರು ಮತ್ತು ತಾಲ್ಲೂಕು ದಂಡಾಧಿಕಾರಿ ನಂದೀಶ್ ಅವರು ತಿಳಿಸಿದ್ದಾರೆ.

error: Content is protected !!