ಕಾವೇರಿ ನಿಸರ್ಗಧಾಮ, ದುಬಾರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

03/07/2020

ಮಡಿಕೇರಿ ಜು.3 : ಕುಶಾಲನಗರ ಅರಣ್ಯ ವಲಯ ವ್ಯಾಪ್ತಿಯ ಕಾವೇರಿ ನಿಸರ್ಗಧಾಮ, ದುಬಾರೆ ಸಾಕಾಣಿಕೆ ಶಿಬಿರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.
ಕನ್ನಿಕ ಮತ್ತು ಸುಜ್ಯೋತಿ ಕುಠೀರ, ಆನೆ ಮಹಲ್, ವನ್ಯ ಜೀವಿ ಚಿಕಿತ್ಸಾ ಕೇಂದ್ರ, ಸಿಬ್ಬಂದಿ ವಸತಿ ಗೃಹ ಉದ್ಘಾಟಿಸಿದರು. ಹಾಗೆಯೇ ದುಬಾರೆ ಸಾಕಾನೆ ಶಿಬಿರ ಪರಿವೀಕ್ಷಣೆ ನಡೆಸಿ ಮಾವುತರು ಮತ್ತು ಕಾವಾಡಿಗರ ಜೊತೆ ಮಾತಕತೆ ನಡೆಸಿದರು. ನಂತರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಕುಶಾಲನಗರ ವಲಯದ ರೈಲ್ವೇ ಬ್ಯಾರಿಕೇಡ್ ಹಾಗೂ ಇನ್ನಿತರ ಕಾಮಗಾರಿಗಳ ವೀಕ್ಷಣೆ ಮಾಡಿದರು. ಮೆಟ್ನಳ್ಳ-ಆನೆಕಾಡು ಶಾಖೆಗೆ ತೆರಳಿ, ಮೆಟ್ನಳ್ಳ ಕಳ್ಳಬೇಟೆ ತಡೆ ಶಿಬಿರದ ಉದ್ಘಾಟನೆ ಮಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.