ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸದಸ್ಯ ಬಿ.ಜೆ.ದೀಪಕ್ ಭೇಟಿ

03/07/2020

ಸೋಮವಾರಪೇಟೆ ಜು.3 : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ.ದೀಪಕ್ ಭೇಟಿ ನೀಡಿ, ಪರೀಕ್ಷಾರ್ಥಿಗಳಿಗೆ ಶುಕ್ರವಾರ ಬಿಸ್ಕತ್ ಹಂಚಿದರು.
ಓಎಲ್‍ವಿ ಹಾಗು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತಿಮ ಪರೀಕ್ಷೆಗೆ ಹಾಜರಾಗಿದ್ದ 532 ವಿದ್ಯಾರ್ಥಿಗಳಿಗೆ ಬಿಸ್ಕತ್ ನೀಡಿದರು.
ಪರೀಕ್ಷೆಗೆ ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು, ಪರೀಕ್ಷಾ ಮೇಲ್ವಿಚಾರಕರಾದ ಯೂಬರ್ಟ್, ಬಿಆರ್‍ಪಿ ವಿಜಯಕುಮಾರ್, ಸ್ಕೌಟ್ ಮತ್ತು ಗೈಡ್ಸ್‍ನ ಚಂದ್ರಕಲಾ ಇದ್ದರು.