ಕೊಡಗು ಕೋವಿಡ್ – 19 : ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು

03/07/2020

ಮಡಿಕೇರಿ ಜು.3 : ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 4 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ.
ಈ ಹಿಂದೆ ಸೋಂಕು ದೃಢಪಟ್ಟ ಮಡಿಕೇರಿಯ ಆಸ್ಪತ್ರೆಯ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಮೂರ್ನಾಡುವಿನ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 49 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಡಿಕೇರಿ ಮಹದೇವಪೇಟೆಯ ಚೌಡೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ವಾಸವಿರುವ 27 ವರ್ಷದ ಪುರುಷ ಆರೋಗ್ಯಕರ್ತರೊಬ್ಬರಲ್ಲೂ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಭಗವತಿ ನಗರದ 24 ವರ್ಷದ ಪುರುಷ ಆರೋಗ್ಯಕರ್ತ ಹಾಗೂ ಜ್ವರ ಲಕ್ಷಣದಿಂದ ಬಳಲುತ್ತಿದ್ದ ವೀರಾಜಪೇಟೆ ಶಾಂತಿನಗರದ 40 ವರ್ಷದ ಪುರುಷರೊಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ ಮಡಿಕೇರಿಯ ಆಸ್ಪತ್ರೆ ವಸತಿಗೃಹ,ಭಗವತಿ ನಗರ, ಮಹದೇವಪೇಟೆ ಮತ್ತು ವೀರಾಜಪೇಟೆಯ ಶಾಂತಿನಗರದಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 76ಕ್ಕೇರಿದ್ದು, 3 ಪ್ರಕರಣ ಗುಣಮುಖವಾಗಿ 73 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆಯೂ 30ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.