ಕೊಡಗು ಜಿಲ್ಲಾ ಸವಿತಾ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ

04/07/2020

ಮಡಿಕೇರಿ ಜು. 4 : ಕೊಡಗು ಜಿಲ್ಲಾ ಸವಿತಾ ಸಮಾಜಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಗುಡ್ಡೆಹೊಸೂರಿನ ವೈ. ಪುಟ್ಟರಾಜು, ಉಪಾಧ್ಯಕ್ಷರಾಗಿ ಎಂ. ಜಿ. ಚರಣ್ ಹಾಗೂ ಶಿವಾಜಿ ಎನ್ .ಆರ್. ಗೋಣಿಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಬೊಟ್ಲಪ್ಪ. ಕಾರ್ಯದರ್ಶಿಯಾಗಿ ಎಸ್. ಬಾಲಕೃಷ್ಣ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಯಾಗಿ ಆರ್. ಲೋಕೇಶ್, ಖಜಾಂಚಿಯಾಗಿ ಹೆಚ್.ಆರ್. ರಾಮಕೃಷ್ಣ, ಕೊಡ್ಲಿಪೇಟೆ ನೇಮಕಗೊಂಡಿದ್ದು, ನಿರ್ದೇಶಕರಾಗಿ ಎಂ.ಎಸ್ ರವೀಂದ್ರ, ಹೆಚ್.ಎ. ಮಧು, ಬಿ. ಎಂ. ದಿವಾಕರ, ಎಂ ಆರ್. ಧರ್ಮೇಂದ್ರ, ಹೆಚ್.ಟಿ. ಗಿರೀಶ್ ರಾಜು, ಎಂ. ಪಿ. ಮಧು, ಹೆಚ್.ಜೆ. ಶಿವಣ್ಣ, ಜಗದೀಶ್ ಭಂಡಾರಿ, ಕೆ.ಟಿ ವೆಂಕಟೇಶ್ ಅವರನ್ನು ಸಮಾಜದ ಅಧ್ಯಕ್ಷ ಕೆ. ಎಸ್. ದೊರೇಶ್ ಅವರ ನೇತೃತ್ವದಲ್ಲಿ ನೇಮಕಮಾಡಲಾಯಿತು.
ಸಭೆಯಲ್ಲಿ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿಣಿ ಸಮಿತಿ ಸದಸ್ಯ ನಾಗರಾಜ ಹಾಗೂ ಮತ್ತಿತರರು ಭಾಗವಹಿಸಿದ್ದರು.