ಜು. 5 ರಂದು ವಿರಾಜಪೇಟೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ

04/07/2020

ಮಡಿಕೇರಿ ಜು.4 : ವಿದ್ಯುತ್ ವಿತರಣಾಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗುವುದರಿಂದ ಕವಿಪ್ರನಿನಿ ರವರ ಕೋರಿಕೆಯಂತೆ ಜುಲೈ 05 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11 ಏಗಿ ವಿರಾಜಪೇಟೆ, ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಅದ್ದರಿಂದ ವೀರಾಜಪೇಟೆ ಪಟ್ಟಣದ ಖಾಸಗೀ ಬಸ್ ನಿಲ್ದಾಣ, ಹರಿಕೇರಿ, ಸುಣ್ಣದ ಬೀದಿ, ಮಟನ್ ಮಾರ್ಕೆಟ್, ಶಾಂತಿನಗರ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.