ಭಾರತಕ್ಕೆ ಬೆಂಬಲ ಸೂಚಿಸಿದ ಜಪಾನ್

04/07/2020

ಟೋಕಿಯೋ ಜು.4 : ಪೂರ್ವ ಲಡಾಖ್‍ನಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಭಾರತಕ್ಕೆ ಗರಿಷ್ಠ ಬೆಂಬಲ ಸೂಚಿಸಿರುವ ಜಪಾನ್ ಈ ಪ್ರದೇಶದಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ “ಏಕಪಕ್ಷೀಯ” ಪ್ರಯತ್ನಕ್ಕೆ ತನ್ನ ಪ್ರಬಲ ವಿರೋಧವಿದೆ ಎಂದು ಹೇಳಿದೆ.
ವಿದೇಶಾಂಗ ಕಾರ್ಯದರ್ಶಿಹರ್ಷವರ್ಧನ್ ಶ್ರೀರಂಗ ಅವರೊಂದಿಗಿನ ಸಭೆಯ ನಂತರ, ಜಪಾನ್ ರಾಯಭಾರಿ ಸತೋಶಿ ಸುಜುಕಿ ಮಾತನಾಡಿ, ಮಾತುಕತೆಯ ಮೂಲಕ ವಿವಾದವು ಶಾಂತಿಯುತವಾಗಿ ಬಗೆಹರಿಯಲಿದೆ ಎಂದು ಜಪಾನ್ ಆಶಿಸುತ್ತದೆ ಎಂದಿದ್ದಾರೆ.
“ವಿದೇಶಾಂಗ ಕಾರ್ಯದರ್ಶಿಗಳೊಂದಿಗಿನ ಉನ್ನತ ಮಟ್ಟದ ಫಲಪ್ರದ ಮಾತುಕತೆ ಬಳಿಕ ಭಾರತ ಸರ್ಕಾರ ಎಲ್ ಎಸಿ ಸಂಘರ್ಷದ ನಂತರ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಅಲ್ಲದೆ ಎರಡೂ ರಾಷ್ಟ್ರಗಳ ನಡುವೆ ಮಾತುಕತೆಯ ಮೂಲಕ ವಿವಾದವು ಕೊನೆಗಾಣಲಿದೆ ಎಂದು ನಮ್ಮ ರಾಷ್ಟ್ರ ಆಶಿಸುತ್ತದೆ” ಜಪಾನ್ ರಾಯಭಾರಿ ಟ್ವೀಟ್ ಮಾಡಿದ್ದಾರೆ.
ಕಳೆದ ಏಳು ವಾರಗಳಿಂದ ಪೂರ್ವ ಮತ್ತು ಲಡಾಕ್‍ನ ಅನೇಕ ಸ್ಥಳಗಳಲ್ಲಿ ಭಾರತೀಯ ಮತ್ತು ಚೀನೀ ಸೈನ್ಯಗಳು ಪರಸ್ಪರ ಕಾದಾಟದಂತ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿದೆ. ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಈ ಬೆಳವಣಿಗೆಗೆ ತೀವ್ರ ಸ್ವರೂಪ ಸಿಕ್ಕಿತ್ತು.