ರೋಟರಿ ಸಂಸ್ಥೆಯ ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯಡಿ 4.50 ಲಕ್ಷ ರೂ. ವೆಚ್ಚದ ಕಾರ್ಡಿಯಾಕ್ ಮಾನಿಟರ್ ಹಸ್ತಾಂತರ

04/07/2020

ಮಡಿಕೇರಿ ಜು.4 : ರೋಟರಿ ಸಂಸ್ಥೆಯ ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯಡಿ ಸುಮಾರು 4.50 ಲಕ್ಷ ರೂ ವೆಚ್ಚದ ಕಾರ್ಡಿಯಾಕ್ ಮಾನಿಟರನ್ನು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಗೌವರ್ನರ್ ಡಾ.ಜೋಸೆಫ್ ಮ್ಯಾಥ್ಯು, ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಜಯಂತ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷರಾದ ಡಾ.ಎ.ಜೆ.ಲೋಕೇಶ್ ಅವರ ಮುಖಾಂತರ ಹಸ್ತಾಂತರಿಸಲಾಯಿತು. ಇದೇ ವೇಳೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕರಾದ ಡಾ.ಎ.ಜೆ.ಲೋಕೇಶ್ ಅವರು ರೋಟರ್ ಸಂಸ್ಥೆಯ ಕಾರ್ಯಕ್ಕೆ ಕೊಡಗು ವೈದ್ಯಕೀಯ ಕಾಲೇಜಿನ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಹಾಯಕ ಗೌವರ್ನರ್ ಪಿ.ಕೆ ರವಿ, ವಲಯ ಕಾರ್ಯದರ್ಶಿ ಎಚ್.ಟಿ ಅನಿಲ್, ರೋಟರಿ ಮಾಜಿ ಗೌವರ್ನರ್ ಸುರೇಶ್ ಚಂಗಪ್ಪ, ಕುಶಾಲನಗರ ರೋಟರಿ ಅಧ್ಯಕ್ಷರಾದ ಅಶೋಕ್, ಮಡಿಕೇರಿ ರೋಟರಿ ಅಧ್ಯಕ್ಷರಾದ ರತನ್ ತಮ್ಮಯ್ಯ, ಪಿರಿಯಾಪಟ್ಟಣ ರೋಟರಿ ಅಧ್ಯಕ್ಷರಾದ ಸುಬ್ರಮಣ್ಯ ಇತರರು ಹಾಜರಿದ್ದರು.