ಶವ ಸಂಸ್ಕಾರ : ಕೋವಿಡ್ – 19 ಮಾರ್ಗಸೂಚಿ ಪಾಲಿಸಲು ಜಿಲ್ಲಾಡಳಿತ ಮನವಿ

ಮಡಿಕೇರಿ ಜು.5 : ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ ಅಥವಾ ಶಂಕಿತ ಪ್ರಕರಣಗಳಲ್ಲಿ ವ್ಯಕ್ತಿಯು ಮೃತಪಟ್ಟಲ್ಲಿ ಶವ ಸಂಸ್ಕಾರ / ಸಮಾಧಿ ಕಾರ್ಯ ನಡೆಸುವ ಬಗ್ಗೆ ಕೊಡಗು ಜಿಲ್ಲಾಡಳಿತವು ವಿವಿಧ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ ಕಾರ್ಯ ವಿಧಾನ ರೂಪಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಮರಣ ಹೊಂದಿದ ಬಗ್ಗೆ ಕೋವಿಡ್ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರು ದೃಢೀಕರಣ ನೀಡುತ್ತಾರೆ. ಫೆÇೀರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು ಶವ ಸಂಸ್ಕಾರ/ಸಮಾಧಿ ವೇಳೆ ಪಾಲಿಸಬೇಕಾದ ಸುರಕ್ಷಿತ ಮತ್ತು ವೈಜ್ಞಾನಿಕ ಕ್ರಮಗಳ ಬಗ್ಗೆ ಮೃತರ ಸಂಬಂಧಿಕರಿಗೆ ವಿವರಿಸುತ್ತಾರೆ.
ಅಗತ್ಯವಿದ್ದಲ್ಲಿ ಮನಶಾಸ್ತ್ರ ವಿಭಾಗದ ಮುಖ್ಯಸ್ಥರು ಸಂಬಂಧಿಕರೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಮೃತ ಶರೀರಕ್ಕೆ ಸೋಂಕು ನಿವಾರಕ ದ್ರಾವಣವನ್ನು ಲೇಪಿಸಿ, ಮುಖ ಕಾಣುವಂತೆ ಪ್ಲಾಸ್ಟಿಕ್ ಹೊದಿಕೆಯಿಂದ ಶರೀರವನ್ನು ಮುಚ್ಚಲಾಗುತ್ತದೆ. ನಂತರ ಐ.ಸಿ.ಯು. ನಿಂದ ಕೋವಿಡ್ ಶವಾಗಾರಕ್ಕೆ ಸಾಗಿಸಲಾಗುತ್ತದೆ.
ಶವಾಗಾರದಲ್ಲಿ ಮೃತ ಶರೀರವನ್ನು ಪ್ಲೆಕ್ಸಿಗ್ಲಾಸ್ ನಿಂದ ತಯಾರಿಸಿದ ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ. ಸಂಬಂಧಿಕರು ಗರಿಷ್ಠ 5 ಮಂದಿ ಮೀರದಂತೆ ಹಾಗೂ ಕನಿಷ್ಠ 4 ಮೀಟರ್ ಅಂತರ ಕಾಯ್ದುಕೊಂಡು, ಮಾಸ್ಕ್ / ಮುಖಗವಸು ಧರಿಸಿ ಅಂತಿಮ ದರ್ಶನ ಮಾಡಬಹುದು. ಯಾವುದೇ ಕಾರಣಕ್ಕೂ ಮೃತ ಶರೀರವನ್ನು ಸ್ಪರ್ಶಿಸುವಂತಿಲ್ಲ. ಇದೇ ರೀತಿ ಶವ ಸಂಸ್ಕಾರ ಸಂದರ್ಭದಲ್ಲಿಯೂ ಸಹ ಅಂತರ ಕಾಯ್ದುಕೊಳ್ಳುವುದು.
ಶವ ಸಂಸ್ಕಾರವನ್ನು ವಿಶೇಷ ತರಬೇತಿ ಹೊಂದಿದ ಸಿಬ್ಬಂದಿಗಳು ನಡೆಸಲಿದ್ದು, ಸಂಬಂಧಿಕರು ಮೃತದೇಹವನ್ನು ಸ್ಪರ್ಶಿಸದೆ ಅಂತರ ಕಾಯ್ದುಕೊಂಡು ಸಾಂಪ್ರದಾಯಿಕ ಕಾರ್ಯಗಳನ್ನು ನಡೆಸಬಹುದಾಗಿದೆ. ಪ್ರತ್ಯೇಕವಾಗಿ ಕಾಯ್ದಿರಿಸಿದ ಜಾಗದಲ್ಲಿಯೇ ಕಡ್ಡಾಯವಾಗಿ ಸರ್ಕಾರ ಹೊರಡಿಸಿರುವ ಕಾರ್ಯ ವಿಧಾನ ಮತ್ತು ಪೆÇ್ರೀಟೋಕಾಲ್ ನಂತೆ ಶವ ಸಂಸ್ಕಾರವನ್ನು ನಡೆಸುವುದು.
ಶರೀರವನ್ನು ಶವ ಸಂಸ್ಕಾರ ಅಥವಾ ಸಮಾಧಿ ಸ್ಥಳಕ್ಕೆ ಪ್ರತ್ಯೇಕ / ವಿಶೇಷ ವಾಹನದ ಮೂಲಕ ಸಾಗಿಸಲಾಗುತ್ತದೆ. ಶವವನ್ನು ಶವ ಸಂಸ್ಕಾರ ಅಥವಾ ಸಮಾಧಿ ಸ್ಥಳಕ್ಕೆ ಸಾಗಿಸುವಾಗ ಪ್ರತ್ಯೇಕ ವಾಹನದಲ್ಲಿ ನಿಯೋಜಿತ ಅಧಿಕಾರಿ/ಸಿಬ್ಬಂದಿ/ಸ್ವಯಂ ಸೇವಕರು ಆಗಮಿಸುತ್ತಾರೆ.
ಶವ ಸಾಗಿಸುವ ಮತ್ತು ಶವ ಸಂಸ್ಕಾರ ಸಮಯದಲ್ಲಿ ತರಬೇತಿ ಹೊಂದಿದ ನಿಯೋಜಿತ ಅಧಿಕಾರಿ/ಸಿಬ್ಬಂದಿ/ಸ್ವಯಂ ಸೇವಕರಿಗೆ ಮತ್ತು ಸಂಬಂಧಿಕರಿಗೆ ಪಿ.ಪಿ.ಇ. ಯೊಂದಿಗೆ ಮಾಸ್ಕ್ ಇತ್ಯಾದಿಗಳನ್ನು ಒಳಗೊಂಡ ಸುರಕ್ಷತಾ ಕಿಟ್ ನೀಡಲಾಗುತ್ತದೆ. ಶವ ಸಂಸ್ಕಾರ / ಸಮಾಧಿಯನ್ನು ಪೆÇಲೀಸ್ ಭದ್ರತೆಯೊಂದಿಗೆ ನಡೆಸಲಾಗುತ್ತದೆ ಮತ್ತು ಈ ಸಮಯದಲ್ಲಿ ನಿಯೋಜಿತರು ವೀಡಿಯೋಗ್ರಾಫಿ ನಡೆಸುತ್ತಾರೆ.
ಶವ ಸಂಸ್ಕಾರಕ್ಕೆ ಅಗತ್ಯವಿರುವ ಕಟ್ಟಿಗೆಯನ್ನು ಅಥವಾ ಸಮಾಧಿ ಕಾರ್ಯಕ್ಕೆ ಅನುಕೂಲಕ್ಕೆ ಜೆ.ಸಿ.ಬಿ. ಯಂತ್ರವನ್ನು ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಒದಗಿಸಲಾಗುವುದು. ಬಳಸಿದ ಪಿ.ಪಿ.ಇ. ಕಿಟ್ ಮತ್ತು ಇತರೆ ಸುರಕ್ಷಿತ ಸಾಧನಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳ ಸುಪರ್ದಿಗೆ ನೀಡುವುದು. ತಾಲ್ಲೂಕು ಆರೋಗ್ಯಾಧಿಕಾರಿಗಳು ಇವುಗಳನ್ನು ಬಯೋ ಮೆಡಿಕಲ್ ತ್ಯಾಜ್ಯ ವಿಲೇವಾರಿ ರೂಪದಲ್ಲಿ ಸುರಕ್ಷಿತವಾಗಿ ವಿಲೇವಾರಿಗೊಳಿಸುತ್ತಾರೆ.
ಮೃತರ ಅತೀ ಹತ್ತಿರದ ನಂಟು ಇರುವವರು ಕಡ್ಡಾಯವಾಗಿ 14 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿ ಇರಬೇಕಾಗಿರುತ್ತದೆ. ಇವರುಗಳ ಗಂಟಲ ದ್ರವ ಮಾದರಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಮೇಲಿನ ಎಲ್ಲಾ ವಿಚಾರಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ವೈದ್ಯಾಧಿಕಾರಿ / ಅಧಿಕಾರಿ / ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಅವರುಗಳು ನಿಯಮಾನುಸಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.