ಸೋಮವಾರಪೇಟೆಯಲ್ಲಿ ನಿಯಮ ಮೀರಿ ನಡೆದ ವಾರದ ಸಂತೆ

06/07/2020

ಮಡಿಕೇರಿ ಜು. 6 : ಸೋಮವಾರಪೇಟೆ ಪಟ್ಟಣದಲ್ಲಿ ಸೋಮವಾರ ನಡೆಯುವ ಸಂತೆ ರದ್ದಾಗಿದ್ದರೂ, ತರಕಾರಿ, ದಿನಸಿ ಮಾರಾಟಕ್ಕೆ ಮುಂದಾಗಿದ್ದ ವ್ಯಾಪಾರಸ್ಥರನ್ನು ಪೊಲೀಸರು ಲಾಟಿ ತೋರಿಸಿ ಬೆದರಿಸಿ ಆಟ್ಟಿದ ಘಟನೆ ನಡೆಯಿತು.
ಕೋವಿಡ್-19 ಸೋಂಕು ಹರುಡುವ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದಲ್ಲಿ ನಡೆಯುವ ಸಂತೆಯನ್ನು ತಾಲೂಕು ಆಡಳಿತ ರದ್ದುಪಡಿಸಿತ್ತು. ಆದರೂ ಸ್ಥಳೀಯ ಕೆಲವು ವ್ಯಾಪಾರಸ್ಥರು ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ತರಕಾರಿ, ದಿನಸಿಗಳನ್ನು Pಹಾಕಿದ್ದರು. ಸಾರ್ವಜನಿಕರು ಸಂತೆಯಲ್ಲಿ ತರಕಾರಿ ಖರೀದಿಸಲು ಮುಗಿಬಿದ್ದ ಕಾರಣ ಜನಸಂದಣಿ ಹೆಚ್ಚಾಗಿತ್ತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಹಾಗು ಸಿಬ್ಬಂದಿಗಳು, ಮಾರುಕಟ್ಟೆಯಿಂದ ತೆರಳುವಂತೆ ಸೂಚನೆ ನೀಡಿದರೂ, ಸ್ಪಂದಿಸಿದೆ ವ್ಯಾಪಾರ ಮುಂದುವರಿಸಿದ್ದಾರೆ. ನಂತರ ಪೊಲೀಸರು ಲಾಟಿ ಸಮೇತ ಬಂದಾಗ, ವ್ಯಾಪಾರ ಬಂದ್ ಮಾಡಿ ತೆರಳಿದ್ದಾರೆ.