ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲ : ಕಾಂಗ್ರೆಸ್ ಉಸ್ತುವಾರಿ ಎಂ‌.ವೆಂಕಪ್ಪಗೌಡ ಆರೋಪ

06/07/2020

ಮಡಿಕೇರಿ ಜು. 6 : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕೂಡ ದಿನಕ್ಕೆ 1900ಕ್ಕೂ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಂ.ವೆಂಕಪ್ಪಗೌಡ ಆರೋಪಿಸಿದ್ದಾರೆ‌.

ನಮ್ಮ ದೇಶದಲ್ಲಿ ಕೊರೊನಾ ಪ್ರಾರಂಭವಾದ ದಿನಗಳಲ್ಲಿದ್ದ ಉತ್ಸಾಹ,ಸರ್ಕಾರಗಳಲ್ಲಿಣ ಅಧಿಕಾರಿಗಳಲ್ಲಿ, ರಾಜಕಾರಣಿಗಳಲ್ಲಿ ,ಅದರಲ್ಲೂ ಬಿಜೆಪಿ ಕಾರ್ಯಕರ್ತರಲ್ಲಿ ಸಂಪೂರ್ಣ ಮಾಯವಾಗಿದೆ ಎಂದು ಎಂ‌.ವೆಂಕಪ್ಪಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಕೊರೊನಾ ಸೋಂಕಿತರಿದ್ದಾಗ ನಮ್ಮ ಪ್ರಧಾನಿ‌ ದೇಶದ ಜನತೆಯಲ್ಲಿ , ನನಗೆ ದೇಶದ ಆರ್ಥಿಕತೆಗಿಂತ ದೇಶದ ಜನರ ಜೀವ ಮುಖ್ಯ ಅಂದಿದ್ದರು.
ದೇಶದ ಜನರು ಚಪ್ಪಾಳೆ ತಟ್ಟಿದರು, ಜಾಗಟೆ ಬಾರಿಸಿದರು, ದೀಪ ಉರಿಸಿದರು, ಕೆಲವು ಕಡೆ ಬಿಜೆಪಿ ಕಾರ್ಯಕರ್ತರಂತೂ‌ ಅದೊಂದು ತಮ್ಮ ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸಿದ್ದರು. ಕೊರೊನಾ ವಾರಿಯರ್ಸ್ ಬದಲು ಮೋದಿಯವರಿಗೆ ಜೈಕಾರಹಾಕಿದ್ದರು.
ಮತ್ತು ನಮ್ಮ ದೇಶಕ್ಕೆ ಕೊರೊನಾ ಸೋಂಕು ಬರುವ ಚಾನ್ಸೇ ಇಲ್ಲ, ಅವೆಲ್ಲವನ್ನೂ ನಮ್ಮ ಆಡಳಿತ ದೇಶಕ್ಕೆ ಪ್ರವೇಶದ ಮೊದಲೇ ಹಿಮ್ಮಟ್ಟಿಸುತ್ತದೆ ಎಂದೆಲ್ಲಾ ಬಿಜೆಪಿಯವರು ಹೇಳಿಕೊಂಡಿದ್ದರು.
ಮಾರ್ಚ್ ತಿಂಗಳಲ್ಲಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಇಪ್ಪತ್ತೈದನೇ ಸ್ಥಾನದಲ್ಲಿ ಇದ್ದ ಭಾರತದಲ್ಲಿ ಇದೀಗ 6ಲಕ್ಷದ 97 ಸಾವಿರಕ್ಕೂ ಹೆಚ್ಚು ಸೋಂಕಿತರು ಇದ್ದಾರೆ.
ಪ್ರಪಂಚದಲ್ಲಿ ಭಾರತ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ರಷ್ಯಾ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನದಲ್ಲಿದೆ‌, ದೇಶದಲ್ಲಿ ಕೊರೊನಾ ಸೋಂಕಿತರ ಹೆಚ್ಚಳವಾಗಲು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವೇ ಕಾರಣವಾಗಿದೆ ಎಂದು ವೆಂಕಪ್ಪಗೌಡ ‌ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಪ್ರಾಣಿಗಳಿಗಿಂತಲೂ ಕಡೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದ್ದು, ರಾಜ್ಯದ ಜನತೆಯ ಹಿತ ಕಾಪಡಬೇಕಾಗಿದ್ದ, ಸರ್ಕಾರದ ಸಚಿವರುಗಳು ಪರಸ್ಪರ ಗುದ್ದಾಟದಲ್ಲಿ ತೊಡಗಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಂ.ವೆಂಕಪ್ಪಗೌಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.