ಕ್ವಾರಂಟೈನ್ ನಲ್ಲಿರುವವರಿಗೆ ಕಿಸ್ವಾ, ಕೆ.ಎಸ್.ಎ ಯಿಂದ ಆಹಾರ ಸಾಮಾಗ್ರಿಗಳ ವಿತರಣೆ

06/07/2020

ಮಡಿಕೇರಿ ಜು. 6 : ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ , ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ವತಿಯಿಂದ ಮಡಿಕೇರಿಯಲ್ಲಿ  ಕ್ವಾರಂಟೈನಿನಲ್ಲಿರುವರಿಗೆ ಆಹಾರ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವು  ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಸಯ್ಯದ್ ಇಲ್ಯಾಸ್ ಸಖಾಫಿ ತಂಙಳ್, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಹಾಗೂ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಹಲವಾರು ಸಮಾಜಸೇವೆಗಳನ್ನು ಮಾಡುತ್ತಾ ಬಂದಿದೆ.ಈ ಸಮಾಜದಲ್ಲಿನ ಬಡವರ ಪಾಲಿನ‌ ಆಶಾಕಿರಣವಾಗಿದೆ ಕಿಸ್ವಾ ಹಾಗೂ ಕೆ.ಎಸ್.ಎ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಇಲ್ಯಾಸ್ ತಂಙಲ್ ಹೇಳಿದರು.

 ಕಿಸ್ವಾ, ಕೆ.ಎಸ್.ಎ ಕೋಡಿನೇಟರ್ ಹಫೀಳ್ ಸಅದಿ ಮಾತನಾಡಿ, ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ತನ್ನ ಕಾರ್ಯ ಚಟುವಟಿಕೆಗಳೊಂದಿಗೆ ಎಲ್ಲರ ಮನೆ ಮಾತಾಗಿದ್ದರು ಎಂದು ಹಫೀಲ್ ಸಹದಿ ಹೇಳಿದರು. ಅಲ್ಲದೇ ರಮಳಾನ್ ಎಸ್.ವೈ.ಸ್ ಹಾಗೂ ಕಿಸ್ವಾ  ಸಹಯೋಗದೊಂದಿಗೆ ಮನೆಯಿಲ್ಲದ ಬಡಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಹಾಗೂ ಕಿಟ್ ಹಾಗೂ ಕೆಲವೊಂದು ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಕಿಸ್ವಾ ,ಸೌದಿ ರಾಷ್ಟ್ರೀಯ ಸಮಿತಿ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯದ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಸಹಾಯ ಹಸ್ತವನ್ನು ಚಾಚಿದ್ದರು. ಇದೀಗ‌ ವಿದೇಶದಿಂದ, ಹಾಗೂ ದೇಶದ ವಿವಿಧ ರಾಜ್ಯಗಳಿಂದ ಬಂದು ಮಡಿಕೇರಿಯಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ದಾರೆ ಎಂದು ಹಫೀಲ್ ಸಹದಿ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಉದ್ಘಾಟಿಸಿದರಯ.

ಈ ಸಂದರ್ಭ ಕಿಸ್ವಾ ,ಕೆ.ಎಸ್.ಎ ಪ್ರಮುಖರಾದ ಅಬ್ದುಲ್ ಖಾದರ್ ಎಮ್ಮೆಮಾಡು,ರಫೀಕ್ ನೆಲ್ಲಿಹುದಿಕೇರಿ,ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ವಿ.ಪಿ ಮೊಹಿದ್ದೀನ್ ಪೊನ್ನತ್ಮೊಟೆ  ಹಾಗೂ ಕಿಸ್ವಾ ಸದಸ್ಯರು,ಖಾಸಿಂ ಸಖಾಫಿ ಕೊಂಡಂಗೇರಿ ಸ್ವಾಗತಿಸಿ, ವಂದಿಸಿದರು.