ತೋರ, ಕೆದಮುಳ್ಳೂರು ಗ್ರಾಮದಲ್ಲಿ ಅಕ್ರಮ ಮಂಗನ ಬೇಟೆ : ಮೂವರ ಬಂಧನ

July 6, 2020

ಮಡಿಕೇರಿ ಜು. 6 : ಅಕ್ರಮವಾಗಿ ಮಂಗ ಬೇಟೆ ಮಾಡಿದ ಪ್ರಕರಣವೊಂದು ವಿರಾಜಪೇಟೆ ವಲಯದ ತೋರ, ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಕಾರ್ಯಚರಣೆ ನಡೆಸಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಮಾಂಸ ಕೋವಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗ್ರಾಮದ ನಿವಾಸಿ ಜೀವನ್, ಕರುಂಬಯ್ಯ ಹಾಗೂ ಉಮೇಶ್ ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೂಳಪಡಿಸಲಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. ಖಚಿತ ಸುಳಿವಿನ ಮೇರೆಗೆ ಸಿಬ್ಬಂದಿಗಳು ಉಮೇಶ್ ವಾಸಿಸುತ್ತಿದ್ದ ಲೈನ್ ಮನೆಗೆ ದಾಳಿ ನಡೆಸಿದಾಗ ಮೂರು ಕೆ.ಜಿಯಷ್ಟು ಮಾಂಸ ಪತ್ತೆಯಾಗಿದೆ.
ಕಾರ್ಯಚರಣೆಯಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ಸೋಮಯ್ಯ, ಆರ್.ಎಫ್. ಓ ದಿಲೀಪ್ ಕುಮಾರ್, ಉಸ್ತುವಾರಿಯಲ್ಲಿ ಡಿ.ಆರ್.ಎಫ್.ಓ ದೇಯಂಡ ಸಂಜಿತ್ ಸೋಮಯ್ಯ, ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ನಾಗರಾಜ್, ಮಧು, ವಿಕಾಸ್, ಪ್ರಕಾಶ್, ಲತೇಶ್, ಪೊನ್ನಪ್ಪ ಪಾಲ್ಗೊಂಡಿದ್ದರು.

error: Content is protected !!