ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

06/07/2020

ಮಡಿಕೇರಿ ಜು. 6 : ಪ್ರಸಕ್ತ(2020-21) ಸಾಲಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ಪೂರ್ವ ಪ್ರಾಥಮಿಕ ತರಗತಿಗೆ ಶಿಕ್ಷಕರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪದವಿ ಪೂರ್ವ ಶಿಕ್ಷಣದಲ್ಲಿ (ಪಿಯುಸಿ) ಕನಿಷ್ಠ ಶೇ.50 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. ಎನ್‍ಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ಡಿಪ್ಲೋಮಾ ಇನ್ ನರ್ಸರಿ ಟೀಚರ್ ಎಜುಕೇಶನ್, ಪ್ರೀ ಸ್ಕೂಲ್ ಎಜುಕೇಶನ್, ಅರ್ಲಿ ಚೈಲ್ಡ್‍ಹುಡ್ ಎಜುಕೇಶನ್ ಪ್ರೋಗ್ರಾಂ(ಡಿಸಿಇಡಿ) ಅಥವಾ ಬಿ.ಇಡ್(ನರ್ಸರಿ). 45 ವರ್ಷಕ್ಕಿಂತ ಕಡಿಮೆ ಇರಬೇಕು. ವೇತನ ಪ್ರತಿ ಮಾಹೆ 7,500 ಹಾಗೂ ಇಂಗ್ಲೀಷ್ ಭಾಷಾ ಜ್ಞಾನ ಹೊಂದಿರುವ ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು ಎಂದು ಸೋಮವಾರಪೇಟೆ ತಾಲ್ಲೂಕು ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರು ತಿಳಿಸಿದ್ದಾರೆ.