ಕರ್ಕಳ್ಳಿ ಗ್ರಾಮದಲ್ಲಿ ಧರೆಗುರುಳಿದ ಬೃಹತ್ ಮರ

07/07/2020

ಮಡಿಕೇರಿ ಜು. 7 : ಸೋಮವಾರಪೇಟೆ ತಾಲೂಕಿನ ಕರ್ಕಳ್ಳಿ ಗ್ರಾಮದ ಕಟ್ಟೆ ಬಸವೇಶ್ವರ ದೇವಾಲಯದ ಸಮೀಪ ಭಾರಿ ಗಾಳಿ, ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.
ಸೋಮವಾರಪೇಟೆ ಪಟ್ಟಣದಿಂದ ಕರ್ಕಳ್ಳಿ, ಕೆಂಚಮ್ಮನ ಬಾಣೆ, ಬೇಳೂರು ಗ್ರಾಮಗಳಿಗೆ ತೆರಳುವ ಮಾರ್ಗ ಕರ್ಕಳ್ಳಿಯ ಕಟ್ಟೆ ಬಸವೇಶ್ವರ ದೇವಾಲಯದ ಪಕ್ಕದ ತೋಟವೊಂದರಲ್ಲಿ ಹಲವು ವರ್ಷಗಳಿಂದ ಬೆಳೆದುನಿಂತಿದ್ದ ಬೃಹತ್ ಮರವನ್ನು ತೋಟದ ಮಾಲೀಕರು ತೆರವು ಗೊಳಿಸದೇ ಇರುವುದು ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.