ತಿತಿಮತಿಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬಿಸ್ಕೆಟ್ ವಿತರಣೆ

07/07/2020

ಮಡಿಕೇರಿ ಜು. 7 : ತಿತಿಮತಿಯ ಸರಕಾರಿ ಪ್ರೌಢ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಇತ್ತೀಚಿಗೆ ಗೋಣಿಕೊಪ್ಪಲಿನ ಮಾನಸ ಮೆಡಿಕಲ್ಸ್ ವತಿಯಿಂದ ಬಿಸ್ಕೆಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೆಡಿಕಲ್‍ನ ಮಾಲೀಕರಾದ ಕವಿತಾ ಪೂಣಚ್ಚ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ವಿ.ಎ ದಿನೇಶ್, ಪ್ರಶ್ನೆಪತ್ರಿಕೆಗಳ ಅಭಿರಕ್ಷಕ ಯು.ಕೆ ಅಶ್ರಫ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.