ಗೋಣಿಕೊಪ್ಪಲಿನ ನೇತಾಜಿ ಲೇಔಟ್‍ನ 40 ಮನೆಗಳು ಸೀಲ್‍ಡೌನ್

07/07/2020

ಮಡಿಕೇರಿ ಜು. 7 : ಕೊರೋನ ವೈರಸ್ ಆತಂಕವನ್ನು ಎದುರಿಸುತ್ತಿರುವ ಗೋಣಿಕೊಪ್ಪದ ನೇತಾಜಿ ಲೇಔಟ್‍ನ ಮೊದಲನೇ ಅಡ್ಡ ರಸ್ತೆಯ ಒಂದು ಭಾಗವನ್ನು 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ಗ್ರಾಮದ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಈ ಭಾಗದ 40 ಮನೆಗಳ 125 ಮಂದಿಯನ್ನು ಸಂಪರ್ಕ ತಡೆಯಲ್ಲಿಡಲಾಗಿದೆ.
ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಎಲ್.ಎಂ.ನಂದೀಶ್ ಕುಮಾರ್, ಕಂದಾಯ ಅಧಿಕಾರಿ ಸಿ.ಯು.ರಾಧಾಕೃಷ್ಣ, ಗ್ರಾಮ ಲೆಕ್ಕಾಧಿಕಾರಿ ಎಸ್.ಎನ್.ಮಂಜುನಾಥ್, ಸುನಿಲ್, ರಾಜೇಶ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ನವೀನ್, ರಾಜು, ಆರೋಗ್ಯ ಕಾರ್ಯಕರ್ತೆ ಸುಜಾತ, ಆಶಾ ಕಾರ್ಯಕರ್ತೆ ಪ್ರಿಯಾ ಮತ್ತಿತರರು ಹಾಜರಿದ್ದರು.