ಚೆಕ್ ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆ

07/07/2020

ಸುಂಟಿಕೊಪ್ಪ,ಜು.7: ಕೊಡಗು ಜಿಲ್ಲೆಯಲ್ಲಿ ಕೊರೋನಾ ವ್ಯಾಪಕವಾಗುತ್ತಿದ್ದು ಜಿಲ್ಲೆಯಲ್ಲಿ ಗಡಿಭಾಗದ ತಪಾಸಣಾ ಗೇಟ್‍ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಸುರಕ್ಷತೆ ದಿಸೆಯಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಯಿತು.
ಕೊಪ್ಪ ಚೆಕ್ ಪೋಸ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಕೊಡಗರಹಳ್ಳಿ ಪಂಚಾಯಿತಿ ಕಾರ್ಯದರ್ಶಿ ಸುಕುಮಾರ್ ಅವರುಗಳಿಗೆ ಕೊಪ್ಪ ಟಿಬೇಟಿಯನ್ ಸ್ವಯಂ ಸೇವಕ ಮಹಿಳಾ ಸಂಘದಿಂದ ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಿದರು.